ಬನ್ನಿ ಜ್ಯೋತಿಯನ್ನು ಬೆಳಗಿಸೋಣ: ವಾಯಪೇಯಿಯವರ ಪದ್ಯವನ್ನು ಹಂಚಿಕೊಂಡ ಪಿಎಂ ಮೋದಿ!

ಕೊರೋನಾವೈರಸ್ ವಿರುದ್ಧ ಹೋರಾಡಲು ದೇಶದ ಜನತೆ "ಸಾಮೂಹಿಕ ಸಂಕಲ್ಪ"ವನ್ನು ತೋರಿಸಲು ಭಾನುವಾರ ರಾತ್ರಿ ದೀಪಗಳನ್ನು ಬೆಳಗಿಸಲು ನೆನಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸಿದ್ಧ ಕವಿತೆಯನ್ನು ಪಠಿಸುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೊರೋನಾವೈರಸ್ ವಿರುದ್ಧ ಹೋರಾಡಲು ದೇಶದ ಜನತೆ "ಸಾಮೂಹಿಕ ಸಂಕಲ್ಪ"ವನ್ನು ತೋರಿಸಲು ಭಾನುವಾರ ರಾತ್ರಿ ದೀಪಗಳನ್ನು ಬೆಳಗಿಸಲು ನೆನಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸಿದ್ಧ ಕವಿತೆಯನ್ನು ಪಠಿಸುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
  
"ಅಯೋ ದಿಯಾ ಜಲಾಯೆನ್" (ಬನ್ನಿ ದೀಪವನ್ನು ಬೆಳಗಿಸೋಣ) ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

"ಆವೊ ಫಿರ್ ಸೆ ದಿಯಾ ಜಲಾಯೆನ್" ಇದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಪ್ರತಿಮ ಕವಿತೆಯಾಗಿದೆ. 

ಈ ವಿಡಿಯೋದಲ್ಲಿ ವಾಜಪೇಯಿ ಅವರು ಒಂದು ಹಂತದಿಂದ ಕವಿತೆಯನ್ನು ಪಠಿಸುತ್ತಿದ್ದಾರೆ.

ಕೊರೋನಾವೈರಸ್ ಅನ್ನು ಸೋಲಿಸಲು ದೇಶದ ಜನತೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಗಳಲ್ಲಿ ದೀಪಗಳನ್ನು ಸ್ವಿಚ್ ಆಫ್ ಮಾಡಿ ಮತ್ತು ದೀಪಗಳು, ಮೇಣದ ಬತ್ತಿಗಳು ಅಥವಾ ಮೊಬೈಲ್ ಫೋನ್ ಟಾರ್ಚ್‌ಗಳನ್ನು ಬೆಳಗಿಸುವಂತೆ ಮೋದಿ ಶುಕ್ರವಾರ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com