ಕೋವಿಡ್ 19 ಸೋಂಕಿಗೆ ಲಸಿಕೆ ಕಂಡುಹಿಡಿಯುತ್ತಿರುವ ಹೈದರಾಬಾದ್ ನ ಭರತ್ ಬಯೊಟೆಕ್ ಕಂಪೆನಿ

ಕೋವಿಡ್ 19 ಸೋಂಕಿಗೆ ಲಸಿಕೆ ಕಂಡುಹಿಡಿಯುತ್ತಿರುವ ಹೈದರಾಬಾದ್ ನ ಭರತ್ ಬಯೊಟೆಕ್ ಕಂಪೆನಿ

ಕೋವಿಡ್-19 ವೈರಸ್ ಗುಣಪಡಿಸಲು ಹೈದರಾಬಾದ್ ಮೂಲದ ಲಸಿಕೆ ಉತ್ಪಾದನೆ ಕಂಪೆನಿ ಭರತ್ ಬಯೊಟೆಕ್ ಅಮೆರಿಕದ ವಿಸ್ಕೊನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ಮತ್ತು ಫ್ಲುಗೆನ್ ಎಂಬ ಮತ್ತೊಂದು ಲಸಿಕೆ  ತಯಾರಿಕೆ ಕಂಪೆನಿ ಜೊತೆ ಸೇರಿ ಲಸಿಕೆ ತಯಾರಿಸಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.

ಹೈದರಾಬಾದ್:  ಕೋವಿಡ್-19 ವೈರಸ್ ಗುಣಪಡಿಸಲು ಹೈದರಾಬಾದ್ ಮೂಲದ ಲಸಿಕೆ ಉತ್ಪಾದನೆ ಕಂಪೆನಿ ಭರತ್ ಬಯೊಟೆಕ್ ಅಮೆರಿಕದ ವಿಸ್ಕೊನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ಮತ್ತು ಫ್ಲುಗೆನ್ ಎಂಬ ಮತ್ತೊಂದು ಲಸಿಕೆ  ತಯಾರಿಕೆ ಕಂಪೆನಿ ಜೊತೆ ಸೇರಿ ಲಸಿಕೆ ತಯಾರಿಸಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.

ಈ ಲಸಿಕೆಗೆ ಕೊರೊಫ್ಲು ಎಂದು ಹೆಸರಿಡಲಾಗಿದ್ದು ಈ ವರ್ಷಾಂತ್ಯಕ್ಕೆ ಮನುಷ್ಯನ ಮೇಲೆ ಪ್ರಯೋಗ ಮಾಡುವ ಹಂತಕ್ಕೆ ತಲುಪಲಿದೆ ಎಂದು ಭರತ್ ಬಯೊಟೆಕ್ ತಿಳಿಸಿದೆ. ಕಂಪೆನಿಯು ಲಸಿಕೆ ಉತ್ಪಾದಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಜಾಗತಿಕ ಮಟ್ಟದಲ್ಲಿ ವಿತರಣೆಗೆ ಸುಮಾರು 300 ಮಿಲಿಯನ್ ಪ್ರಮಾಣದ ಲಸಿಕೆ ತಯಾರಿಸಲಿದೆ.

Related Stories

No stories found.

Advertisement

X
Kannada Prabha
www.kannadaprabha.com