ಕೋವಿಡ್-19: ಇಟಲಿಯಿಂದ ಏರ್ ಲಿಫ್ಟ್ ಮಾಡಲಾಗಿದ್ದ 217 ಭಾರತೀಯರಲ್ಲಿ ಕೊರೋನಾ ಸೋಂಕಿಲ್ಲ!

ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದ್ದ 218 ಭಾರತೀಯರ ಪೈಕಿ 217 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದ್ದ 218 ಭಾರತೀಯರ ಪೈಕಿ 217 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಾರ್ಚ್ 15ರಂದು ಇಟಲಿಯ ಮಿಲಾನ್ ನಿಂದ್ ಏರ್ ಇಂಡಿಯಾ ವಿಮಾನದ ಮೂಲಕ 218 ಮಂದಿ ಭಾರತೀಯರನ್ನು ಭಾರತಕ್ಕೆ ಕರೆತರಲಾಗಿತ್ತು. ಭಾರತಕ್ಕೆ ಬಂದ ಬಳಿಕ ಇವರೆಲ್ಲರನ್ನೂ ಕ್ವಾರಂಟೈನ್ ನಲ್ಲಿಡಲಾಗಿತ್ತು. ಇದೀಗ ಇವರನ್ನು ಕೋವಿಡ್ 19 ಪರೀಕ್ಷೆಗೆ  ಒಳಪಡಿಸಲಾಗಿದ್ದು, ಇದರ ವರದಿ ಈಗ ಬಂದಿದೆ. ವರದಿಯಲ್ಲಿರುವ 217 ಮಂದಿಯಲ್ಲಿ ಯಾರಲ್ಲೂ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ ಐಟಿಬಿಪಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಎಲ್ಲ 217 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಮನೆಯಲ್ಲಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ಇನ್ನು ಮತ್ತೋರ್ವ ಭಾರತೀಯ ತನ್ನ ತಂದೆ ತೀರಿಹೋದ ಹಿನ್ನಲೆಯಲ್ಲಿ ವಿಶೇಷ ಅನುಮತಿಯೊಂದಿಗೆ ಅವರು ಮನೆಯಲ್ಲೇ  ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com