ಲಾಕ್‌ಡೌನ್ ಎಂದು ಸುಮ್ನೆ ಕೂರಬೇಡಿ: ಕೌಟುಂಬಿಕ ಹಿಂಸಾಚಾರ ಬಹಿರಂಗಪಡಿಸಲು ಬಂದಿದೆ 'ರೆಡ್ ಡಾಟ್' ಅಸ್ತ್ರ!

ಮಹಿಳಾ ಉದ್ಯಮಿ ಇತಿ ರಾವತ್ ಇತ್ತೀಚೆಗೆ ತಮ್ಮ ಮೇಲ್ ನಲ್ಲಿ ಒಂದು ಸಮ್ದೇಶ ಸ್ವೀಕರಿಸಿದ್ದರು. ಅದರಲ್ಲಿ ಓರ್ವ ಮಹಿಳೆಯ ತನ್ನ ಅಂಗೈಮೇಲೆ ಕೆಂಪು ಚುಕ್ಕೆ ಹೊಂದಿದ್ದ ಚಿತ್ರದೊಡನೆ "ಮ್ಯಾಮ್, ನನಗೆ ನಿಮ್ಮ ಸಹಾಯ ಬೇಕು" ಎಂಬ ಸಂದೇಶವಿತ್ತು.  ಮಹಿಳೆ ಮೇಲೆ ಮನೆಯಲ್ಲಿ ನಡೆಯುವ  ಕಿರುಕುಳಕ್ಕೆ ಸಂಬಂಧಿಸಿ ಈ ಸಂದೇಶವಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹಿಳಾ ಉದ್ಯಮಿ ಇತಿ ರಾವತ್ ಇತ್ತೀಚೆಗೆ ತಮ್ಮ ಮೇಲ್ ನಲ್ಲಿ ಒಂದು ಸಮ್ದೇಶ ಸ್ವೀಕರಿಸಿದ್ದರು. ಅದರಲ್ಲಿ ಓರ್ವ ಮಹಿಳೆಯ ತನ್ನ ಅಂಗೈಮೇಲೆ ಕೆಂಪು ಚುಕ್ಕೆ ಹೊಂದಿದ್ದ ಚಿತ್ರದೊಡನೆ "ಮ್ಯಾಮ್, ನನಗೆ ನಿಮ್ಮ ಸಹಾಯ ಬೇಕು" ಎಂಬ ಸಂದೇಶವಿತ್ತು.  ಮಹಿಳೆ ಮೇಲೆ ಮನೆಯಲ್ಲಿ ನಡೆಯುವ  ಕಿರುಕುಳಕ್ಕೆ ಸಂಬಂಧಿಸಿ ಈ ಸಂದೇಶವಿತ್ತು.

ಕೊರೋನಾವೈರಸ್ ಹಾವಳಿಯ ಕಾರಣ  ಭಾರತದಲ್ಲಿ ಲಾಕ್ ಡೌನ್ ಹೇರಿದಾಗಿನಿಂದ ಮಹಿಳೆ ಮೇಲೆ ನಡೆಯುವ ಕೌಟುಂಬಿಕ ಕಿರುಕುಳದ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಲಾಕ್‌ಡೌನ್‌ನಿಂದಾಗಿ ಯಾರೂ ಹೊರಹೋಗುವುದು ನಿರ್ಬಂಧಿಸಲ್ಪಟ್ಟಿದ್ದು ಇದರಿಂದ ಕೌಟುಂಬಿಕ ಕಲಹ ಹಾಗೂ ಮನೆಯೊಳಗೆ ಮಹಿಳೆ ಮೇಲೆ ನಡೆಯುವ ಕಿರುಕುಳಗಳ ಪ್ರಮಾಣದಲ್ಲಿ ಹೆಚ್ಚಳವಾಗುವಂತೆ ಂಆಡಿದೆ. ಹಲವಾರು ಮಹಿಳೆಯರು ಹೊರಹೋಗಲು ಸಹಾಯ ಪಡೆಯಲು ಪೊಲೀಸರ ನೆರವು ಪಡೆಯಲು ವಿಫಲವಾಗಿದ್ದಾರೆ.ಅಲ್ಲದೆ ಬಹಳ ಭಯಭೀತರಾಗಿದ್ದಾರೆ. ಅಂತಹ ಮಹಿಳೆಯರನ್ನು ತಲುಪಲು ಸಹಾಯ ಮಾಡಲು, ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವ ಲಾಭದಾಯಕ ಸಂಸ್ಥೆಯಲ್ಲದ ವೆಫ್ಟ್( (Women Entrepreneurs For Transformation)  ಫೌಂಡೇಷನ್ 'ರೆಡ್ ಡಾಟ್' ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ನಾಗರಿಕರು ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾದವರನ್ನು ಕೆಂಪು ಚುಕ್ಕೆ ತೋರಿಸುವ ಮೂಲಕ ಆಕೆಯ ಪರಿಸ್ಥಿತಿಯನ್ನು ಅರಿಯಬಹುದು. 

"ಅಂಗೈಯಲ್ಲಿ ಕೆಂಪು ಚುಕ್ಕೆ ನೋಡುವ ನಾಗರಿಕರು ಸಾಮಾಜಿಕ ಮಾಧ್ಯಮ ಅಥವಾ weftinfo@gmail.com ಇಮೇಲ್ ಮೂಲಕ ವೆಫ್ಟ್ ಜತೆಗೆ ಸಂಪರ್ಕ ಹೊಂದಬಹುದು ಅಥವಾ ಅವರು 181 ಗೆ ಕರೆ ಮಾಡಬಹುದು, ಟೋಲ್ ಫ್ರೀ ಸಂಖ್ಯೆ" ಎಂದು ರಾವತ್ ಪಿಟಿಐಗೆ ತಿಳಿಸಿದರು. ಮೂರು ದಿನಗಳ ಹಿಂದೆ ಪ್ರಾರಂಭಿಸಲಾದ ಈ ಉಪಕ್ರಮಕ್ಕೆ ದೇಶಾದ್ಯಂತ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರಿಂದ  20 ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಸಂಸ್ಥೆಯ ಸಂಸ್ಥಾಪಕ ರಾವತ್ ಹೇಳಿದ್ದಾರೆ.

ಅವರು ಸ್ವೀಕರಿಸಿದ ಪ್ರಕರಣಗಳ ಬಗ್ಗೆ ಮಾತನಾಡಿದ ರಾವತ್, ಪ್ರಕರಣಗಳಲ್ಲಿ ಒಂದು ಕೋಲ್ಕತ್ತಾದಾಗಿದ್ದು, ಲಾಕ್ ಡೌನ್ ಆಗಿದ್ದಾಗಿನಿಂದಲೂ ಉದ್ಯೋಗವಿಲ್ಲದ ಪತಿಯೊಂದಿಗೆ ಸಂತ್ರಸ್ತೆ ಮನೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.ಅವನು ಹೆಂಡತಿಯನ್ನು ಹೊಡೆಯುತ್ತಿದ್ದನು, ಅವಳ ಉಳಿತಾಯಗಳನ್ನೆಲ್ಲಾ ತೆಗೆದುಕೊಂಡು ತನ್ನ ಮಗನ ಮುಂದೆ ಹಲ್ಲೆ ಮಾಡುತ್ತಿದ್ದನು ಎಂದು ರಾವತ್ ಹೇಳಿದರು."ಅವರು ಕೆಂಪು ಚುಕ್ಕೆ ಉಪಕ್ರಮದ ಮೂಲಕ ವೆಫ್ಟ್ T ಅನ್ನು ಸಂಪರ್ಕಿಸಿದರು. ನಾವು ಅವಳನ್ನು ಆಹಾರದೊಂದಿಗೆ ತಲುಪಿದ್ದೇವೆ. ಅವರಿಗೆ ಸಹಾಯ ಮಾಡಿದ್ದೇವೆ" ಎಂದು ಅವರು ಹೇಳಿದರು.

ಕೆಂಪು ಚುಕ್ಕಿ  ಉಪಕ್ರಮವು ನಾಗರಿಕರ ನೇತೃತ್ವದ ಚಳುವಳಿಯಾಗಿದ್ದು, ವೈರಲ್ ಆಗಬಹುದಾದ ವೀಡಿಯೊಗಳು ಮತ್ತು ಕಥೆಗಳನ್ನು ರಚಿಸಲು ಅವರು ಯೋಜಿಸಿದ್ದಾರೆ, ಇದರಿಂದ ಜನರು ಈ ಚಿಹ್ನೆಯನ್ನು ಕೌಟುಂಬಿಕ ಹಿಂಸಾಚಾರದ ಸೂಚಕವಾಗಿ ಗುರುತಿಸಲು ಪ್ರಾರಂಭಿಸುತ್ತಾರೆ."ಲಾಕ್ ಡೌನ್ ಸಮಯದಲ್ಲಿ, ಬಲಿಪಶುಗಳು ಈಗ ಜೈಲಿನಲ್ಲಿರುವಂತೆ ದಬ್ಬಾಳಿಕೆ ನಡೆಸುವವರೊಡನೆ ಸಿಲುಕಿದ್ದಾರೆ"'ರೆಡ್ ಡಾಟ್ ಆನ್ ದಿ ಪಾಮ್' ಅನ್ನು ಕೌಟುಂಬಿಕ ಹಿಂಸಾಚಾರದ ಜಾಗತಿಕ ಸಂಕೇತವನ್ನಾಗಿ ಮಾಡಲು ನಾವು ಬಯಸುತ್ತೇವೆ. ಈ ರೀತಿಯಾಗಿ ಅನೇಕ ಮಹಿಳೆಯರು ಮೌನವನ್ನು ಮುರಿಯುತ್ತಾರೆ ಮತ್ತು ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ "ಎಂದು ರಾವತ್ ಹೇಳಿದರು.

ಲಾಕ್ ಡೌನ್ ಜಾರಿಗೊಳಿಸಿದಾಗಿನಿಂದ ಕೌಟುಂಬಿಕ ಹಿಂಸಾಚಾರದ ಪ್ರಕರಣದಲ್ಲಿ ಹೆಚ್ಚಳವಾಗಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗವು ಸಹ ಗುರುತಿಸಿದೆ.ಮಾರ್ಚ್ 24 ರಿಂದ ಏಪ್ರಿಲ್ 1 ರವರೆಗೆ ಎನ್‌ಸಿಡಬ್ಲ್ಯುಗೆ 69 ಕೌಟುಂಬಿಕ ಹಿಂಸಾಚಾರ ದೂರುಗಳು ಬಂದಿವೆ ಮತ್ತು ಅವು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com