ದೊಡ್ಡ ಪ್ರಮಾಣದಲ್ಲಿ ಕೊರೋನಾ ಟೆಸ್ಟ್ ನಡೆಸಲು ಸರ್ಕಾರ ಮುಂದಾಗಲಿ: ಪ್ರಿಯಾಂಕಾ ಗಾಂಧಿ

ಕೊರೋನಾವೈರಸ್ ಟೆಸ್ಟ್ ನ ಪ್ರಮಾಣವನ್ನು ದೇಶವು ತಕ್ಷಣದಿಂದ ಹೆಚ್ಚಳ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.ಹಾಗೆಯೇ ಶೀಘ್ರ ಫಲಿತಾಂಶ ನೀಡುವಂತೆಯೂ ಸರ್ಕಾರ ಕ್ರಮ ಕಒಗೊಳ್ಳಬೇಕು ಎಂದು  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಕೊರೋನಾವೈರಸ್ ಟೆಸ್ಟ್ ನ ಪ್ರಮಾಣವನ್ನು ದೇಶವು ತಕ್ಷಣದಿಂದ ಹೆಚ್ಚಳ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.ಹಾಗೆಯೇ ಶೀಘ್ರ ಫಲಿತಾಂಶ ನೀಡುವಂತೆಯೂ ಸರ್ಕಾರ ಕ್ರಮ ಕಒಗೊಳ್ಳಬೇಕು ಎಂದು  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ರೋಗದ ತೀವ್ರತೆ, ರೋಗ ಹರಡುವಿಕೆ ಹಾಗೂ ರೋಗದ ಕೇಂದ್ರಬಿಂದುಗಳ ಳ ಬಗ್ಗೆ ಅತ್ಯಮೂಲ್ಯವಾದ ಮಾಹಿತಿಯನ್ನು ಪರೀಕ್ಷೆಯಿಂದ ಪಡೆಯಲಾಗುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರತಿಪಾದಿಸಿದರು.

"ಭಾರತವು ತನ್ನ ಪರೀಕ್ಷಾ ಪ್ರಂಆನವನ್ನು ತಕ್ಷಣವೇ ಹೆಚ್ಚಿಸುವುದು ಕಡ್ಡಾಯವಾಗಿದೆ" ಎಂದು ಪ್ರಿಯಾಂಕಾ ಗಾಂಧಿ ಟ್ವಿಟ್ ಮಾಡಿದ್ದಾರೆ."ಈ ಲಾಕ್‌ಡೌನ್ ಫಲಿತಾಂಶವನ್ನು ಪಡೆಯಲು, ಈ ದೇಶದಲ್ಲಿನ ವೈದ್ಯಕೀಯ ಮೂಲಸೌಕರ್ಯ ವ್ಯವಸ್ಥೆಗಳ ಬೆಂಬಲದಿಂದ  ದೊಡ್ಡ ಪ್ರಮಾಣದ ಪರೀಕ್ಷೆ ಮತ್ತು ಇತರ ಕ್ರಮಗಳನ್ನು ಕಒಗೊಳ್ಳಬೇಕು. . ಸರ್ಕಾರ ಈಗ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು" ಎಂದು ಅವರು ಹೇಳಿದರು.

ಪ್ರಿಯಾಂಕಾ ಗಾಂಧಿ  ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಕ್ಷಣಾ ಸಾಧನಗಳು ಸಿಗುತ್ತಿಲ್ಲ ಮತ್ತು ಅವರ ಸಂಬಳವನ್ನು ಕಡಿತಗೊಳಿಸುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಈ ಸಮಯದಲ್ಲಿ, ವೈದ್ಯಕೀಯ ಸಿಬ್ಬಂದಿಗೆ ಎಲ್ಲಾ ಸಹಕಾರ ನೀಡಬೇಕಿದೆ ಎಂದು  ಅವರು ಹೇಳಿದರು.

"ಅವರು ಜೀವ ನೀಡುವವರು ಮತ್ತು ಯೋಧರಂತೆ ಸೆಣೆಸುತ್ತಿದ್ದಾರೆ.ಬಂಧಾದಲ್ಲಿ ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ನೀಡದಿರುವುದು ಮತ್ತು ಅವರ ಸಂಬಳವನ್ನು ಕಡಿತಗೊಳಿಸುವುದರ ಮೂಲಕ ದೊಡ್ಡ ಅನ್ಯಾಯ ಮಾಡಲಾಗುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಈ "ಯೋಧರಿಗೆ" ಅನ್ಯಾಯ ಮಾಡುವ ಸಮಯ ಇದಲ್ಲ  ಆದರೆ ಅವರ ಮಾತುಗಳನ್ನು ಆಲಿಸಿ ಎಂದು ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com