ಕೋವಿಡ್-19: ಸೋಮವಾರ ಪ್ರಧಾನಿ ನೇತೃತ್ವದಲ್ಲಿ ಸಚಿವರ ಸಮಿತಿ ಸಭೆ

ಕೊರೋನಾವೈರಸ್ ಕಾರಣ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿರುವ ಮಧ್ಯೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರ ಸಮಿತಿಯ ಸಭೆ ನಡೆಯಲಿದೆ.
ಪ್ರಧಾನಿ ನೇತೃತ್ವದ ಸಭೆ
ಪ್ರಧಾನಿ ನೇತೃತ್ವದ ಸಭೆ

ನವದೆಹಲಿ: ಕೊರೋನಾವೈರಸ್ ಕಾರಣ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿರುವ ಮಧ್ಯೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರ ಸಮಿತಿಯ ಸಭೆ ನಡೆಯಲಿದೆ.ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಚಿವರ ಸಮಿತಿಯ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದೆ.

ಸಚಿವರ ಸಮಿತಿ ಸಭೆಯ ನಂತರ ಮಂಗಳವಾರ ಸಂಪುಟ ಸಭೆ ನಡೆಯಲಿದೆ. ಈ ಎರಡು ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಿಸಿದ ನಂತರ ಮೊದಲ ಬಾರಿ ನಡೆಯಲಿರುವ ಸಚಿವರ ಸಮಿತಿಯ ಸಭೆಯಾಗಿದೆ.ಕೋವಿಡ್ -19 ನಿಯಂತ್ರಣ ಹಾಗೂ ಪರಿಣಾಮಕಾರಿ ಲಾಕ್ ಡೌನ್ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. 

ಕೊರೋನಾವೈರಸ್ ನಿಂದ ಎದುರಾಗಿರುವ ಸವಾಲುಗಳು, ಸರ್ಕಾರ ಕೈಗೊಂಡಿರುವ ಕ್ರಮಗಳ ಅನುಷ್ಟಾನದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com