ಕೊರೋನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಯಾವುದೇ ಪುರಾವೆಗಳಿಲ್ಲ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ-ಕೇಂದ್ರ ಸರ್ಕಾರ

ಕೊರೋನಾವೈರಸ್ ಸೋಂಕು ಗಾಳಿಯಲ್ಲಿ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ.

Published: 05th April 2020 06:03 PM  |   Last Updated: 05th April 2020 06:22 PM   |  A+A-


Corona_Casual_photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ಕೊರೋನಾವೈರಸ್ ಸೋಂಕು ಗಾಳಿಯಲ್ಲಿ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ.

ಗಾಳಿಯಲ್ಲಿ ಸೋಂಕು ಹರಡುವಿಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಸ್ಪಷ್ಟಪಡಿಸಿದೆ. 

ಈ ಮಧ್ಯೆ  ತಬ್ಲೀಘಿ  ಘಟನೆಯಿಂದಾಗಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದ್ವಿಗುಣವಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಸ್ತುತ 4.1 ದಿನಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಸಂಖ್ಯೆ ದ್ವಿಗುಣವಾಗುತ್ತಿದೆ. ಆದರೆ ತಬ್ಲೀಘಿ ಜಮಾತ್  ಘಟನೆಯಿಂದಾಗಿ ಹೆಚ್ಚುವರಿ ಪ್ರಕರಣಗಳು ವರದಿಯಾಗದಿದ್ದರೆ, ದ್ವಿಗುಣಗೊಳಿಸುವ ಪ್ರಮಾಣ 7.4 ದಿನಗಳು ಆಗಿರುತಿತ್ತು ಎಂದು  ಕೇಂದ್ರ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ 19 ಸೋಂಕು ತಗುಲಿದ 267 ಜನರು ಗುಣಮುಖರಾಗಿದ್ದಾರೆ. ಶನಿವಾರದಿಂದ 11 ಸಾವು, 472 ಹೊಸ ಪ್ರಕರಣಗಳು ವರದಿಯಾಗಿದ್ದು, 79 ಜನರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು. 

 24 ರಾಜ್ಯಗಳು, 399 ಜಿಲ್ಲೆಗಳಲ್ಲಿ ಈ ಸೋಂಕು ಕಂಡುಬಂದಿದ್ದು, ಹಾಟ್ ಸ್ಪಟ್ ಗಳಲ್ಲಿ ಬಪರ್ ವಲಯ ಹಾಗೂ ನಿರ್ಬಂಧಿತ ಪ್ರದೇಶಗಳನ್ನು ಗುರುತಿಸಲಾಗಿದೆ. ನಿರ್ಬಂಧಿತ ಪ್ರದೇಶಗಳ ಕಡೆಯಲ್ಲಿರುವ ಎಲ್ಲಾ ಶಾಲೆಗಳು, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಕೋವಿಡ್ ಪರೀಕ್ಷೆಯನ್ನು ಅಯುಷ್ಮನ್ ಭಾರತ್ ಯೋಜನೆ ವ್ಯಾಪ್ತಿಗೊಳ್ಳಪಡಿಸಲಾಗುವುದು ಎಂದು ಅಗರ್ ವಾಲ್ ತಿಳಿಸಿದರು.

 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp