ಹತ್ತೇ ದಿನಗಳಲ್ಲಿ 40 ಸಾವಿರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್ ಗಳು ಸಿದ್ಧ: ರೈಲ್ವೆಯ ಮಹತ್ತರ ಸಾಧನೆ! 

ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಐಸೋಲೇಷನ್ ವಾರ್ಡ್ ಗಳ ಸೌಲಭ್ಯ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.  ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಮಹತ್ತರ ಸಾಧನೆ ಮಾಡಿದೆ. 
ಐಸೊಲೇಷನ್ ವಾರ್ಡ್ ಗಳಾಗಿ ಪರಿವರ್ತನೆಯಾಗಿರುವ ರೈಲು ಬೋಗಿಗಳು
ಐಸೊಲೇಷನ್ ವಾರ್ಡ್ ಗಳಾಗಿ ಪರಿವರ್ತನೆಯಾಗಿರುವ ರೈಲು ಬೋಗಿಗಳು

ನವದೆಹಲಿ: ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಐಸೋಲೇಷನ್ ವಾರ್ಡ್ ಗಳ ಸೌಲಭ್ಯ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.  ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಮಹತ್ತರ ಸಾಧನೆ ಮಾಡಿದೆ. 

ಲಾಕ್ ಡೌನ್ ಘೋಷಣೆಯಾದ 10 ದಿನಗಳಲ್ಲಿ ರೈಲ್ವೆ ಇಲಾಖೆ 2,500 ರೈಲು ಬೋಗಿಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸಿದ್ದು, ಸರಿಸುಮಾರು 40 ಸಾವಿರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾದ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸಿದ್ಧಗೊಳಿಸಿದೆ. 

ರೈಲ್ವೆ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಾರಂಭದಲ್ಲಿ 5,000 ಕೋಚ್ ಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವ ಯೋಜನೆ ಇದೆ. ಮಾನವ ಸಂಪನ್ಮೂಲ ಇಲ್ಲದೇ ಇರುವ ಸಂಕಷ್ಟದ ಸ್ಥಿತಿಯಲ್ಲೂ ರೈಲ್ವೆ ಇಲಾಖೆ ಅಸಾಧ್ಯವಾದ ಕೆಲಸವನ್ನು ಕೇವಲ 10 ದಿನಗಳಲ್ಲಿ ಪೂರ್ಣಗೊಳಿಸಿದೆ. 2,500 ಬೋಗಿಗಳನ್ನು ವೈದ್ಯಕೀಯ ಮಾನದಂಡದ ಪ್ರಕಾರ ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವ ಮೂಲಕ 40,000 ಐಸೊಲೇಷನ್ ಬೆಡ್ ಗಳನ್ನು ಸೃಷ್ಟಿಸಲಾಗಿದೆ. ಈಗ ಎಂತಹ ಸವಾಲಿನ ಪರಿಸ್ಥಿತಿ ಎದುರಿಸುವುದಕ್ಕೂ ಭಾರತ ಸಜ್ಜಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ದೇಶಾದ್ಯಂತ 133 ಪ್ರದೇಶಗಳಲ್ಲಿ ದಿನವೊಂದಕ್ಕೆ ಸರಾಸರಿ 375 ರೈಲು ಬೋಗಿಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com