ಕೊರೋನಾವೈರಸ್ ಹಿಮ್ಮೆಟ್ಟಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ನಾಯಕಿ!ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ದೀಪ ಬೆಳಗಿಸಲು ಕರೆ ನೀಡಿದ್ದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಉತ್ತರ ಪ್ರದೇಶದ ಹಿರಿಯ ಬಿಜೆಪಿ  ನಾಯಕಿಯೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Published: 06th April 2020 01:46 PM  |   Last Updated: 06th April 2020 01:55 PM   |  A+A-


Manju_Tiwari_firing1

ಗುಂಡು ಹಾರಿಸುತ್ತಿರುವ ಮಂಜು ತಿವಾರಿ

Posted By : Nagaraja AB
Source : UNI

ಬಲರಾಮ್‍ಪುರ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ದೀಪ ಬೆಳಗಿಸಲು ಕರೆ ನೀಡಿದ್ದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಉತ್ತರ ಪ್ರದೇಶದ ಹಿರಿಯ ಬಿಜೆಪಿ  ನಾಯಕಿಯೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜು ತಿವಾರಿ  ತಮ್ಮ ನಿವಾಸದಲ್ಲಿ ಭಾನುವಾರ ರಾತ್ರಿ ದೀಪ ಹಚ್ಚಿದ ನಂತರ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆಯ ವಿಡಿಯೋವನ್ನು ಸ್ವತಃ ಆಕೆಯೇ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಪೊಲೀಸರು  ಸೋಮವಾರ ತಿಳಿಸಿದ್ದಾರೆ

ಮಂಜು ತಿವಾರಿ ತಮ್ಮ ಪತಿ ಓಂ ಪ್ರಕಾಶ್ ತಿವಾರಿಯ ಪರವಾನಗಿ ಹೊಂದಿದ್ದ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ  ಕೊರೊನಾವೈರಸ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ‘ದೀಪ ಬೆಳಗಿಸಿದ ನಂತರ ಕೊರೊನಾವೈರಸ್‍ ಹಿಮ್ಮೆಟ್ಟಿಸಲು  ಗುಂಡು ಹಾರಿಸಿದ್ದೇನೆ.’  ಎಂದು ಹೇಳಿರುವ ವಿಡಿಯೋವನ್ನು ಮಂಜು ತಿವಾರಿ ಫೇಸ್‍ಬುಕ್‍ನಲ್ಲಿ ವಿಡಿಯೊನಲ್ಲಿ ಅಪ್ಲೋಡ್ ಮಾಡಿದ್ದಾರೆ

 

ಇಡೀ ನಗರ ದೀಪಗಳಿಂದ ಕಂಗೊಳಿಸುತ್ತಿದ್ದರಿಂದ ದೀಪಾಳಿಯಂತೆ ಭಾಸವಾಯಿತು. ಹಾಗಾಗೀ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ತಪ್ಪು ಮಾಡಿದ್ದೇನೆ. ಇದಕ್ಕಾಗಿ ಕ್ಷಮೆಯಾಚಿಸುವುದಾಗಿ  ಮಂಜು ತಿವಾರಿ ಹೇಳಿದ್ದಾರೆ

Stay up to date on all the latest ರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp