ಟ್ರಂಪ್ ಬಳಿಕ ಇದೀಗ ಹೈಡ್ರಾಕ್ಸಿಕ್ಲೋರೋಕ್ವಿನ್'ಗಾಗಿ ಮೋದಿಗೆ ದುಂಬಾಲು ಬಿದ್ದ 30 ದೇಶಗಳು!

ಕೊರೋನಾ ವೈರಸ್ ಗೆ ದಿವ್ಯೌಷಧವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೆಲಸ ಮಾಡುತ್ತದೆ ಎಂಬ ಅಂಶ ಬೆಳಕಿಗೆ ಬಂದ ತಕ್ಷಣ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವಂತೆ ದುಂಬಾಲು ಬಿದ್ದಿದ್ದು ಇದೀಗ ಜಗತ್ತಿನ 30 ರಾಷ್ಟ್ರಗಳು ಮೋದಿಗೆ ಮನವಿ ಮಾಡಿವೆ. 

Published: 06th April 2020 06:33 PM  |   Last Updated: 06th April 2020 06:33 PM   |  A+A-


Modi

ಬಲಿಷ್ಠ ರಾಷ್ಟ್ರದ ನಾಯಕರ ಜೊತೆ ಮೋದಿ

Posted By : Vishwanath S
Source : Online Desk

ನವದೆಹಲಿ: ಕೊರೋನಾ ವೈರಸ್ ಗೆ ದಿವ್ಯೌಷಧವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೆಲಸ ಮಾಡುತ್ತದೆ ಎಂಬ ಅಂಶ ಬೆಳಕಿಗೆ ಬಂದ ತಕ್ಷಣ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವಂತೆ ದುಂಬಾಲು ಬಿದ್ದಿದ್ದು ಇದೀಗ ಜಗತ್ತಿನ 30 ರಾಷ್ಟ್ರಗಳು ಮೋದಿಗೆ ಮನವಿ ಮಾಡಿವೆ. 

ಕೊರೋನಾ ವೈರಸ್ ನಿಂದ ಭಾರತದಲ್ಲೂ ಪರಿಸ್ಥಿತಿ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ದೇಶದೊಳಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷದದ ಅಗತ್ಯ ಹೆಚ್ಚಾಗಿರುವುದರಿಂದ ರಫ್ತಿಗೆ ಭಾರತ ನಿಷೇಧ ಹೇರಿತ್ತು. 

ಇನ್ನು ಟ್ರಂಪ್ ಬಳಿಕ ಇದೀಗ 30 ರಾಷ್ಟ್ರಗಳ ಪ್ರಧಾನಿಗಳು ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ರಫ್ತು ಮಾಡುವಂತೆ ಮನವಿ ಮಾಡಿವೆ ಎಂದು ತಿಳಿದುಬಂದಿದೆ. 

ಕೊರೋನಾ ವೈರಸ್ ಗೆ ರಾಮಬಾಣವಾಗಿ ಮಲೇರಿಯಾ ಔಷಧ ಕೆಲಸ ಮಾಡುತ್ತದೆ ಎಂದು ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿಷೇಧ ಹೇರಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp