ಕೊವಿಡ್-19: ದೇಶದಲ್ಲಿ ಶೇ.76 ರಷ್ಟು ಪುರುಷರಿಗೆ ಸೋಂಕು, 25 ಸಾವಿರ ತಬ್ಲಿಘಿ ಸದಸ್ಯರ, ಸಂಪರ್ಕದಲ್ಲಿದ್ದರಿಗೆ ಕ್ವಾರಂಟೈನ್

ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 693 ಹೊಸ ಪ್ರಕರಣಗಳು ಪತ್ತೆಯಾಗಿವೆ.

Published: 06th April 2020 06:43 PM  |   Last Updated: 06th April 2020 06:43 PM   |  A+A-


covid-19

ನಿಜಾಮುದ್ದೀನ್ ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು

Posted By : Lingaraj Badiger
Source : The New Indian Express

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 693 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಸ್  ಸೋಂಕಿತರ 4,067ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.

ಈ ಸಂಬಂಧ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್‍ ಅವರು, ಭಾನುವಾರ ಸಂಜೆಯಿಂದ ಸಕ್ರಿಯ ಪ್ರಕರಣಗಳು 693 ರಷ್ಟು ಏರಿಕೆಯಾಗಿದ್ದು, ಒಟ್ಟು ಸಂಖ್ಯೆ ಇದುವರೆಗೆ 4,067 ರಷ್ಟಿದೆ. ಸಾವಿನ ಸಂಖ್ಯೆ 109ಕ್ಕೆ ಏರಿದ್ದು, ಭಾನುವಾರ ಸಂಜೆಯಿಂದ 23 ಸಾವುಗಳು ವರದಿಯಾಗಿವೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಪೈಕಿ ಶೇ. 76ರಷ್ಟು ಪುರುಷರು ಹಾಗೂ ಶೇ. 24ರಷ್ಟು ಮಹಿಳೆಯರಿದ್ದಾರೆ ಎಂದು ಅಗರವಾಲ್ ಅವರು ತಿಳಿಸಿದ್ದಾರೆ.

ನಿನ್ನೆ ಸಂಜೆಯಿಂದ 17ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು, ದೇಶಾದ್ಯಂತ ಸೋಂಕಿತ ಒಟ್ಟು 291 ಮಂದಿ ಗುಣಮುಖರಾಗಿದ್ದಾರೆ. ಒಂದೆರಡು ದಿನಗಳಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಮುಂದುವರಿದಿದ್ದು, 780 ಸೋಂಕಿತ ಪ್ರಕರಣಗಳು ಮತ್ತು 45 ಸಾವುಗಳ ವರದಿಯೊಂದಿಗೆ ಮಹಾರಾಷ್ಟ್ರ ದೇಶದಲ್ಲೇ ಹೆಚ್ಚು ಬಾಧಿತ ರಾಜ್ಯವೆನಿಸಿದೆ. ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 621ಕ್ಕೆ ಏರಿದ್ದು, ಐವರು ಸಾವನ್ನಪ್ಪಿದ್ದಾರೆ. 

ಈ ಮಧ್ಯ, ಸುಮಾರು 25 ಸಾವಿರ ತಬ್ಲಿಘಿ ಜಮಾತ್ ಕಾರ್ಯಕರ್ತರು ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp