30 ಸಾವಿರ ಕೋಟಿಗೆ ಏಕತಾ ಪ್ರತಿಮೆ ಮಾರಾಟಕ್ಕೆ; ಒಎಲ್ಎಕ್ಸ್ ವಿರುದ್ಧ ಪೊಲೀಸ್ ದೂರು

ವಿಶ್ವದ ಅತೀ ದೊಡ್ಡ ಪ್ರತಿಮೆ ಎಂಬ ಕೀರ್ತಿ ಹೊಂದಿರುವ ಸ್ಟ್ಯಾಚ್ಯೂ ಆಫ್ ಯೂನಿಟಿ (ಏಕತಾ ಪ್ರತಿಮೆ)ಯನ್ನು ಮಾರಾಟಕ್ಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಆ್ಯಪ್ ಆಧಾರಿತ ಆನ್ ಲೈನ್ ಮಾರಾಟ ಸಂಸ್ಥೆ ಒಎಲ್ಎಕ್ಸ್ ವಿರುದ್ಧ ಪೊಲೀಸ್ ದೂರು  ದಾಖಲಾಗಿದೆ.
ಏಕತಾ ಪ್ರತಿಮೆ
ಏಕತಾ ಪ್ರತಿಮೆ

ಅಹ್ಮದಾಬಾದ್: ವಿಶ್ವದ ಅತೀ ದೊಡ್ಡ ಪ್ರತಿಮೆ ಎಂಬ ಕೀರ್ತಿ ಹೊಂದಿರುವ ಸ್ಟ್ಯಾಚ್ಯೂ ಆಫ್ ಯೂನಿಟಿ (ಏಕತಾ ಪ್ರತಿಮೆ)ಯನ್ನು ಮಾರಾಟಕ್ಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಆ್ಯಪ್ ಆಧಾರಿತ ಆನ್ ಲೈನ್ ಮಾರಾಟ ಸಂಸ್ಥೆ ಒಎಲ್ಎಕ್ಸ್ ವಿರುದ್ಧ ಪೊಲೀಸ್ ದೂರು  ದಾಖಲಾಗಿದೆ.

ವ್ಯಕ್ತಿಯೊಬ್ಬರು ಏಕತಾ ಪ್ರತಿಮೆಯ ಫೋಟೊವೊಂದನ್ನು ಒಎಲ್ಎಕ್ಸ್ ನಲ್ಲಿ ಅಪ್ಲೋಡ್ ಮಾಡಿ 30 ಸಾವಿರ ಕೋಟಿ ರೂಗೆ ಇದನ್ನು ಮಾರಾಟ ಮಾಡುವುದಾಗಿ ಹೇಳಿದ್ದರು. ಈ ಜಾಹಿರಾತನ್ನು ಯಾವುದೇ ರೀತಿಯ ಪೂರ್ವಾಪರ ವಿಚಾರಸಿದೆ ಸಾರ್ವಜನಿಕವಾಗಿ ಜಾಹಿರಾತು ಪ್ರಸಾರ  ಮಾಡಿದ್ದಾಕ್ಕಾಗಿ ಕೆವಾಡಿಯಾ ಸ್ಥಳೀಯ ಆಡಳಿತ ಪೊಲೀಸ್ ದೂರು ನೀಡಿದೆ. 

ಈ ಬಗ್ಗೆ ಮಾತನಾಡಿರುವ ಕೆವಾಡಿಯಾದ ಉಪ ಆಯುಕ್ತ ನಿಲೇಶ್ ದುಬೆ ಅವರು ಮಾತನಾಡಿ ಏಕತಾ ಪ್ರತಿಮೆ ದೇಶದ ಆಸ್ತಿ. ಇದನ್ನು ಯಾರೋ ಒಬ್ಬರು ಮಾರಾಟದ ಜಾಹಿರಾತು ನೀಡಿದರೆ ಅದರ ಪೂರ್ವಾಪರ ವಿಚಾರಿಸದೇ ಒಎಲ್ಎಕ್ಸ್ ಸಂಸ್ಥೆ ಜಾಹಿರಾತು ಪ್ರಸಾರ ಮಾಡಿದೆ.  ಹೀಗಾಗಿ ಸಂಸ್ಥೆಯ ವಿರುದ್ಧ ಪೊಲೀಸ್ ದೂರು ನೀಡಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com