ಆರ್ಥಿಕತೆ ಮೇಲೆ ಕೋವಿಡ್-19 ರ ಪ್ರಹಾರ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧರಾಗಿ: ಸಚಿವರಿಗೆ ಪ್ರಧಾನಿ 

ಆರ್ಥಿಕತೆ ಮೇಲೆ ಕೋವಿಡ್-19 ರ ಪ್ರಹಾರ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಆರ್ಥಿಕತೆ ಮೇಲೆ ಕೋವಿಡ್-19 ರ ಪ್ರಹಾರ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. 

ಈ ಸಂಕಷ್ಟದ ಸ್ಥಿತಿಯನ್ನು ಮೇಕ್-ಇನ್-ಇಂಡಿಯಾವನ್ನು ಉತ್ತೇಜಿಸುವುದಕ್ಕೆ ಯಾವ ರೀತಿಯಲ್ಲಿ ಸಕಾರಾತ್ಮಕ ಬಳಕೆ ಮಾಡಿಕೊಂಡು, ಬೇರೆ ರಾಷ್ಟ್ರಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಚಿವರಿಗೆ ಸೂಚನೆ ನೀಡಿದ್ದಾರೆ.

21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಸಂಪುಟ ಸಹೋದ್ಯೋಗಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಹಂತ-ಹಂತವಾಗಿ ಲಾಕ್ ಡೌನ್ ತೆಗೆಯುವ ಸೂಚನೆ ನೀಡಿದ್ದು, ಹಾಟ್ ಸ್ಪಾಟ್ ಗಳಿಲ್ಲದ ಪ್ರದೇಶಗಳಲ್ಲಿ ನಿಧಾನವಾಗಿ ಎಂದಿನ ಸ್ಥಿತಿಗೆ ಮರಳಲು ಯೋಜನೆ ಸಿದ್ಧಪಡಿಸಬೇಕೆಂದು ಹೇಳಿದ್ದಾರೆ. 

ಇದೇ ವೇಳೆ ಆರ್ಥಿಕತೆ ಮೇಲೆ ಕೋವಿಡ್-19 ಪರಿಣಾಮಗಳ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ 
ಆರ್ಥಿಕತೆ ಮೇಲೆ ಕೋವಿಡ್-19 ರ ಪ್ರಹಾರ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧರಾಗಬೇಕೆಂದು ಹೇಳಿದ್ದಾರೆ. 

ಇದೇ ವೇಳೆ ಭಾರತದ ರಫ್ತುಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಮೋದಿ ಸಚಿವರೊಂದಿಗೆ ಮಾತನಾಡಿದ್ದು, ಉತ್ಪಾದನೆ ಹಾಗೂ ರಫ್ತುಗಳನ್ನು ಉತ್ತೇಜಿಸುವ ಕ್ರಿಯಾತ್ಮಕ ಸಲಹೆಗಳನ್ನು ನೀಡಬೇಕೆಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com