ತಮಿಳುನಾಡಿನಲ್ಲಿ ಹೆಚ್ಚಿದ ಕೊರೋನಾ ಆಂತಕ: ಟೆಸ್ಟಿಂಗ್ ಕಿಟ್‌ಗಾಗಿ ಚೀನಾಗೆ ಮೊರೆಯಿಟ್ಟ ಸರ್ಕಾರ!

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು ಇದರಿಂದ ಆತಂಕಗೊಂಡಿರುವ ರಾಜ್ಯ ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಲು ಟೆಸ್ಟಿಂಗ್ ಕಿಟ್‌ಗಾಗಿ ಚೀನಾಗೆ ಬೇಡಿಕೆಯಿಟ್ಟಿದೆ. 
ಪಳನಿಸ್ವಾಮಿ-ಜಿನ್ ಪಿಂಗ್
ಪಳನಿಸ್ವಾಮಿ-ಜಿನ್ ಪಿಂಗ್

ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು ಇದರಿಂದ ಆತಂಕಗೊಂಡಿರುವ ರಾಜ್ಯ ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಲು ಟೆಸ್ಟಿಂಗ್ ಕಿಟ್‌ಗಾಗಿ ಚೀನಾಗೆ ಬೇಡಿಕೆಯಿಟ್ಟಿದೆ. 

ಈ ಟೆಸ್ಟಿಂಗ್ ಕಿಟ್‌ನಲ್ಲಿ ಮೂವತ್ತು ನಿಮಿಷಗಳಲ್ಲೇ ಫಲಿತಾಂಶ ಸಿಗಲಿದೆ. ಹೀಗಾಗಿ ತಮಿಳುನಾಡು ಸರ್ಕಾರ 1 ಲಕ್ಷ ಟೆಸ್ಟಿಂಗ್ ಕಿಟ್‌ಗಾಗಿ ಚೀನಾಗೆ ಬೇಡಿಕೆಯಿಟ್ಟಿದ್ದು ಏಪ್ರಿಲ್ 9ರಂದು ರಾಜ್ಯಕ್ಕೆ ಕಿಟ್ ಗಳ ಆಮದಾಗಲಿದೆ. 

ಕೂಡಲೇ ಎಲ್ಲಾ ಜಿಲ್ಲೆಗಳಿಗೂ ಟೆಸ್ಟಿಂಗ್ ಕಿಟ್‌ಗಳನ್ನು ರವಾನಿಸಲಾಗುವುದು. ಏಪ್ರಿಲ್ 10ರಿಂದಲೇ ಹೆಚ್ಚುವರಿಯಾಗಿ ಟೆಸ್ಟ್ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಳನಿಸ್ವಾಮಿ ಅವರು, ಏರ್ ಪೋರ್ಟ್ ಗಳಲ್ಲಿ 2,10,538 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಈ ಪೈಕಿ 90,541 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ 10,816 ಮಂದಿ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದರು. 

ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 621ಕ್ಕೇರಿದ್ದು 5 ಮಂದಿ ಮೃತಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com