ದೆಹಲಿಯಲ್ಲಿ ಕೊರೋನಾ ವಿರುದ್ಧ ಹೋರಾಟಕ್ಕೆ '5ಟಿ ಯೋಜನೆ' ಸಿದ್ಧಪಡಿಸಿದ ಕೇಜ್ರೀವಾಲ್

ಮಾರಾಣಾಂತಿಕ ಕೊರೋನಾ ವೈರಸ್ ಸೋಂಕನ್ನು ಸದೆಬಡಿಯಲು ದೆಹಲಿಯ ಆಮ್ ಆದ್ಮಿ ಸರ್ಕಾರ '5ಟಿ ಯೋಜನೆ'ಯನ್ನು ಸಿದ್ಧಪಡಿಸಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಮಾರಾಣಾಂತಿಕ ಕೊರೋನಾ ವೈರಸ್ ಸೋಂಕನ್ನು ಸದೆಬಡಿಯಲು ದೆಹಲಿಯ ಆಮ್ ಆದ್ಮಿ ಸರ್ಕಾರ '5ಟಿ ಯೋಜನೆ'ಯನ್ನು ಸಿದ್ಧಪಡಿಸಿದೆ.

ಈ ಕುರಿತು ಡಿಜಿಟಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು, ಎಲ್ ಎನ್ ಜೆಪಿ ಆಸ್ಪತ್ರೆ, ಜಿಬಿ ಪಂತ್ ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗಳನ್ನು ಕೊವಿಡ್-19 ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.

5ಟಿ ಯೋಜನೆಯೆಂದರೆ, ಪರೀಕ್ಷೆ, ಪತ್ತೆ ಹಚ್ಚುವುದು, ಚಿಕಿತ್ಸೆ ನೀಡುವುದು, ತಂಡವಾಗಿ ಕೆಲಸ ಮಾಡುವುದು ಮತ್ತು ನಿರ್ವಹಣೆ(ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್, ಟೀಮ್ ವರ್ಕ್ ಮತ್ತು ಟ್ರ್ಯಾಕಿಂಗ್ ಆ್ಯಂಡ್ ಮಾನಿಟರಿಂಗ್ ) ದೆಹಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದರು.

ಕೊವಿಡ್-19 ರೋಗಿಗಳಿಗಾಗಿಯೇ ನಗರದ ಆಸ್ಪತ್ರೆಗಳಲ್ಲಿ 2,950 ಬೆಡ್ ಗಳನ್ನು ಮೀಸಲಿಡಲಾಗಿದೆ. ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದರೆ 12 ಸಾವಿರ ಹೋಟೆಲ್ ರೂಮ್ ಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಕೊರೋನಾ ವೈರಸ್ ಸೋಂಕಿತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸುಮಾರು 1 ಲಕ್ಷ ಮಂದಿಯನ್ನು ಪರಿಕ್ಷೆಗೆ ಒಳಪಡಿಸಲಾಗುವುದು. ಅಗತ್ಯಬಿದ್ದರೆ ಕೊವಿಡ್-19 ರೋಗಿಗಳ ಚಿಕಿತ್ಸೆಗಾಗಿ ನಗರದ ಧರ್ಮಶಾಲಾಗಳನ್ನು ಮತ್ತು ಬ್ಯಾಂಕ್ವೆಟ್ ಹಾಲ್ ಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com