ಪಾಕಿಸ್ತಾನವನ್ನು ಬಗ್ಗುಬಡಿಯುವಲ್ಲಿ ಭಾರತೀಯ ನೌಕಾಪಡೆ ಎಂದೂ ವಿಫಲವಾಗಿಲ್ಲ: ಕಾಮೆಂಟೇಟರ್ ಪಿ ಅಶೋಕ್ ತಿರುಗೇಟು

ಪೂರ್ವ ಪಾಕಿಸ್ತಾನವನ್ನು (ಬಾಂಗ್ಲಾದೇಶ) ಭಾರತ ಉದ್ದೇಶಪೂರ್ವಕವಾಗಿ ಕಳೆದುಕೊಂಡಿತು ಎಂಬರ್ಥದ ಲೇಖನಗಳು ಪಾಕ್ ನ ಪತ್ರಿಕೆಗಳಿಗೆ ಪ್ರಕಟವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಮೆಂಟೇಟರ್ ಪಿ.ಅಶೋಕ್,  ಪಾಕಿಸ್ತಾನದ ಸಂಸ್ಕೃತಿ, ಮೌಲ್ಯಗಳು ಹಾಗೂ ಪರಂಪರೆಯ ಮೇಲೆ ವಿದೇಶಿ ಶಕ್ತಿಗಳು ದಬ್ಬಾಳಿಕೆ ನಡೆಸುತ್ತಿದೆ.
ಭಾರತೀಯ ನೌಕಾಪಡೆ
ಭಾರತೀಯ ನೌಕಾಪಡೆ

ನವದೆಹಲಿ: ಪೂರ್ವ ಪಾಕಿಸ್ತಾನವನ್ನು (ಬಾಂಗ್ಲಾದೇಶ) ಭಾರತ ಉದ್ದೇಶಪೂರ್ವಕವಾಗಿ ಕಳೆದುಕೊಂಡಿತು ಎಂಬರ್ಥದ ಲೇಖನಗಳು ಪಾಕ್ ನ ಪತ್ರಿಕೆಗಳಿಗೆ ಪ್ರಕಟವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಮೆಂಟೇಟರ್ ಪಿ.ಅಶೋಕ್,  ಪಾಕಿಸ್ತಾನದ ಸಂಸ್ಕೃತಿ, ಮೌಲ್ಯಗಳು ಹಾಗೂ ಪರಂಪರೆಯ ಮೇಲೆ ವಿದೇಶಿ ಶಕ್ತಿಗಳು ದಬ್ಬಾಳಿಕೆ ನಡೆಸುತ್ತಿದೆ. ಪರಿಣಾಮವಾಗಿ ಬಲುಚಿಸ್ತಾನ ಯುದ್ಧಪೀಡಿತ ವಲಯವಾಗಿ ಪರಿವರ್ತನೆಯಾಗಿದೆ ಎಂದಿದ್ದಾರೆ.  

ಇವರು ಪಾಕ್ ನ ದಿ ನ್ಯೂಸ್ ಪತ್ರಿಕೆಯಲ್ಲಿ ಅಮ್ಜದ್ ಬಷಿರ್ ಸಿದ್ದಿಖಿ ಎಂಬ ಹಿರಿಯ ಪತ್ರಕರ್ತರೊಬ್ಬರು ಇತ್ತೀಚೆಗೆ ಬರೆದ ಹೌ ಇಂಡಿಯನ್ ನೇವಿ ಮಿಸ್ಡ್ ದಿ ಬೋಟ್ ಇನ್ 1971 ಎಂಬ ಲೇಖನಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಲೇಖಕರು ಇಬ್ಬರು ಭಾರತೀಯ ಬರಹಗಾರರಾದ ಸಂದೀಪ್ ಉನ್ನಿಥನ್ ಹಾಗೂ ಕ್ಯಾಪ್ಟನ್ ಎಂ.ಅನ್.ಆರ್ ಸಮಂತ್ ಅವರ ಆಪರೇಷನ್ ಎಕ್ಸ್ ಪುಸ್ತಕಗಳನ್ನು ಚತುರತೆಯಿಂದ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಲುಚಿಸ್ತಾನದ ಪರಿಸ್ಥಿತಿಗೆ ಪೂರ್ವ ಪಾಕಿಸ್ತಾನಕ್ಕೆ ಸಮನಾಗಿದೆ. ಪೂರ್ವ ಪಾಕಿಸ್ತಾನದ ಪರಿಸ್ಥಿತಿಯೇ ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು ಎಂಬುದನ್ನು ಮರೆಯಬಾರದು ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಮಾಲ್ಕಮ್ ಗ್ಲಾಡ್ ವೆಲ್ ಅವರ ಔಟ್ ಲೈಯರ್ ದಿ ಸ್ಟೋರಿ ಆಫ್ ಸಕ್ಸಸ್ ಪುಸ್ತಕವನ್ನು ಉಲ್ಲೇಖಿಸಿರುವ ಅವರು, ಒಂದು ತಪ್ಪಿನಿಂದ ಅವಘಡಗಳು ನಡೆಯುವುದಿಲ್ಲ, ಬದಲಿಗೆ ಅನೇಕ ಸಣ್ಣ ಸಮಸ್ಯೆಗಳು ಒಟ್ಟಾಗಿ ದೊಡ್ಡ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

ಗ್ಲಾಡ್ ವೆಲ್ ಪ್ರಕಾರ, ಏಳು ಸಣ್ಣ ಮನುಷ್ಯರ ತಪ್ಪುಗಳು ಒಂದು ಅವಘಡಕ್ಕೆ ಕಾರಣವಾಗುತ್ತದೆ. ಹಾಗೆಯೇ ಪಾಕಿಸ್ತಾನ ಇಂತಹ ಸಣ್ಣ ತಪ್ಪುಗಳನ್ನು ಮಾಡಲಾರಂಭಿಸಿದೆ. ನೌಕಾ ಹಡಗಿನ ಮೇಲೆ ದಾಳಿ, ಬಲುಚಿಸ್ತಾನದ ಸಮಸ್ಯೆಗಳು,  ಒಕ್ಕೂಟ ವ್ಯವಸ್ಥೆಯಿರುವ ಬುಡಕಟ್ಟು ಪ್ರದೇಶಗಳಲ್ಲಿ ತಮ್ಮದೇ ಪ್ರಜೆಗಳನ್ನು ಹತ್ಯೆ ಮಾಡಲು ಗನ್ ಗಳನ್ನು ಬಳಸುವುದು ಹಾಗೂ ಅಣ್ವಸ್ತ್ರ ಸಂಗ್ರಹಣೆಯಲ್ಲಿ ತೊಡಗಿರುವುದು ಈ ತಪ್ಪುಗಳಾಗಿವೆ ಎಂದಿದ್ದಾರೆ.

ಪೂರ್ವ ಪಾಕಿಸ್ತಾನದ (ಬಲುಚಿಸ್ತಾನ) ಮೇಲೆ ನಿರಂತರ ದಾಳಿ ನಡೆಸಿತ್ತು. ಅಲ್ಲಿನ ಜನರ ಮೇಲೆ ಅತ್ಯಾಚಾರ ನಡೆದಿತ್ತು. ಈಗ ಸಿದ್ದಿಖಿ ತನ್ನ ಚತುರತೆಯಿಂದ ಅದನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಸಿದ್ದಿಖಿ ಅವರ ಪ್ರಯತ್ನ ಕೇವಲ ಒಂದು ಅರಣ್ಯರೋಧನ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

2014ರ ಸೆಪ್ಟೆಂಬರ್ 6ರಂದು ಪಾಕಿಸ್ತಾನದ ನೌಕಾಪಡೆ ಭಾರತೀಯ ನೌಕಾಪಡೆಯನ್ನು ಗುರಿಯಾಗಿಸಿ, ತಮ್ಮದೇ ಸ್ವಂತ ಹಡಗನ್ನು ಹೈಜಾಕ್ ಮಾಡಿದ್ದರು. ಇದು ಪಾಕ್ ಸೇನೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಆದರೆ, ಅದನ್ನು ತಕ್ಷಣ ಮುಚ್ಚಿಹಾಕಲಾಯಿತು ಎಂದಿದ್ದಾರೆ.

1965ರಲ್ಲಿ ಭಾರತೀಯ ನೌಕಾಪಡೆಗೆ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವ ಅವಕಾಶ ದೊರೆಯಲಿಲ್ಲ ಎಂದು ಸಿದ್ದಿಖಿ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತದಂತಹ ದೇಶಗಳಲ್ಲಿ ಸೇನಾ ಪಡೆಗಳು ಸರ್ಕಾರದ ಆದೇಶ ಪಾಲಿಸುತ್ತವೆ ಎಂದು ಲೇಖಕರು ಅರ್ಥ ಮಾಡಿಕೊಂಡಿಲ್ಲ. 1965 ಹಾಗೂ 1971ರಲ್ಲಿ ಕೂಡ ನೌಕಾಪಡೆ ಸರ್ಕಾರದ ಆದೇಶ ಪಾಲಿಸಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com