ಭಾರತದಲ್ಲಿ ಕೊರೋನಾ 2-3 ನೇ ಹಂತದ ನಡುವೆ ಇದೆ! 

ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಇದು ಯಾವ ಹಂತದಲ್ಲಿದೆ ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 
ಭಾರತದಲ್ಲಿ ಕೊರೋನಾ 2-3 ನೇ ಹಂತದ ನಡುವೆ ಇದೆ!
ಭಾರತದಲ್ಲಿ ಕೊರೋನಾ 2-3 ನೇ ಹಂತದ ನಡುವೆ ಇದೆ!

ನವದೆಹಲಿ: ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಇದು ಯಾವ ಹಂತದಲ್ಲಿದೆ ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಕೋವಿಡ್-19 ಟಾಸ್ಕ್ ಫೋರ್ಸ್ ನ ಏಮ್ಸ್ ನಿರ್ದೇಶಕ ಡಾ. ರಣ್ದೀಪ್ ಗುಲೇರಿಯಾ ಮಾತನಾಡಿದ್ದು, ಕೊರೋನಾ ವೈರಸ್ ಕೆಲವೆಡೆ ಸ್ಥಳೀಯವಾಗಿ ಸಮುದಾಯಕ್ಕೆ ಹರಡಿದೆ, ಭಾರತ 2 ಹಾಗೂ 3 ನೇ ಹಂತದ ಮಧ್ಯದಲ್ಲಿದೆ. 

ಭಾರತದ ಬಹುತೇಕ ಪ್ರದೇಶಗಳು 2 ನೇ ಹಂತದಲ್ಲಿದೆ ಎಂದು ಡಾ.ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದು, ಡಾ.ರಣ್ದೀಪ್ ಗುಲೇರಿಯಾ ಹೇಳಿರುವುದು ನಾವು ಹೇಳುತ್ತಿರುವುದಕ್ಕೆ ವಿರುದ್ಧವಾಗಿಲ್ಲ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com