ತಲೆಮರೆಸಿಕೊಂಡಿರುವ ತಬ್ಲೀಘಿ ಜಮಾತ್ ಮಾರ್ಕಜ್ ಮುಖ್ಯಸ್ಥ ತನಿಖೆಗೆ ಸಹಕರಿಸುತ್ತಾರೆ: ವಕೀಲ

ಸದ್ಯ ತಬ್ಲೀಘಿ ಜಮಾತ್ ಮಾರ್ಕಜ್ ಧಾರ್ಮಿಕ ಸಭೆ ದೇಶವನ್ನೇ ಕಂಗೆಡಿಸಿದ್ದು ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಅಂತೆ ಮರ್ಕಜ್ ಮುಖ್ಯಸ್ಥ ಮೊಹಮ್ಮದ್ ಸಾದ್ ಇದೀಗ ತಲೆಮರೆಸಿಕೊಂಡಿದ್ದಾನೆ.
ಮೊಹಮ್ಮದ್ ಸಾದ್
ಮೊಹಮ್ಮದ್ ಸಾದ್

ನವದೆಹಲಿ: ಸದ್ಯ ತಬ್ಲೀಘಿ ಜಮಾತ್ ಮಾರ್ಕಜ್ ಧಾರ್ಮಿಕ ಸಭೆ ದೇಶವನ್ನೇ ಕಂಗೆಡಿಸಿದ್ದು ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಅಂತೆ ಮರ್ಕಜ್ ಮುಖ್ಯಸ್ಥ ಮೊಹಮ್ಮದ್ ಸಾದ್ ಇದೀಗ ತಲೆಮರೆಸಿಕೊಂಡಿದ್ದಾನೆ.

ಈ ಧಾರ್ಮಿಕ ಸಭೆ ನಂತರ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಮರ್ಕಜ್ ಮುಖ್ಯಸ್ಥನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಅಂದಿನಿಂದ ಮೊಹಮ್ಮದ್ ಸಾದ್ ತಲೆಮರೆಸಿಕೊಂಡಿದ್ದು ಇದೀಗ ಸಂಘಟನೆಯ ವಕೀಲ್ ತನಿಖೆಗೆ ಮೊಹಮ್ಮದ್ ಸಾದ್ ಸಹಕರಿಸುವುದಾಗಿ ತಿಳಿಸಿದ್ದಾರೆ. 

ಅವರ ತಲೆಮರೆಸಿಕೊಂಡಿದ್ದರೂ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಇನ್ನು ಎಂಟು-ಒಂಬತ್ತು ದಿನಗಳ ನಂತರ ಹೊರಗೆ ಬರುತ್ತಾರೆ. ಆಗ ಅವರು ತನಿಖೆಗೆ ಸಹಕರಿಸುತ್ತಾರೆ ಎಂದು ವಕೀಲ್ ತೌಸಿಫ್ ಖಾನ್ ತಿಳಿಸಿದ್ದಾರೆ.

ದೇಶದಲ್ಲಿ ಅದಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷಿಸಾಗಿದ್ದು ಈ ಪೈಕಿ 4,421 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಕಳೆದ 24 ಗಂಟೆಯಲ್ಲಿ ದೇಶದಲ್ಲಿ 354 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 117ಕ್ಕೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com