ಕೋವಿಡ್-19 ಸೋಂಕಿತರ ಸಂಖ್ಯೆ 4,789 ಕ್ಕೆ ಏರಿಕೆ: 1,000 ಪ್ರಕರಣ ದಾಟಿದ ಮೊದಲ ರಾಜ್ಯ ಮಹಾರಾಷ್ಟ್ರ! 

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೊರೋನಾ ವೈರಸ್ ನ ಹೊಸ 508 ಸೋಂಕಿತರು ಪತ್ತೆಯಾಗಿದ್ದು, 4,789 ಕ್ಕೆ ಏರಿಕೆಯಾಗಿದೆ. ಈವರೆಗೂ 124 ಜನರು ಸಾವನ್ನಪ್ಪಿದ್ದಾರೆ. 
ಕೋವಿಡ್-19 ಸೋಂಕಿತರ ಸಂಖ್ಯೆ 4,789 ಕ್ಕೆ ಏರಿಕೆ
ಕೋವಿಡ್-19 ಸೋಂಕಿತರ ಸಂಖ್ಯೆ 4,789 ಕ್ಕೆ ಏರಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೊರೋನಾ ವೈರಸ್ ನ ಹೊಸ 508 ಸೋಂಕಿತರು ಪತ್ತೆಯಾಗಿದ್ದು, 4,789 ಕ್ಕೆ ಏರಿಕೆಯಾಗಿದೆ. ಈವರೆಗೂ 124 ಜನರು ಸಾವನ್ನಪ್ಪಿದ್ದಾರೆ. 

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು ಈ 4,789 ಸೋಂಕಿತರ ಪೈಕಿ 352 ಸೋಂಕಿತರು ಗುಣಮುಖರಾಗಿದ್ದು ಓರ್ವ ಸ್ಥಳಾಂತರಗೊಂಡಿದ್ದಾರೆ. ಈ ಮೂಲಕ ಭಾರತದಲ್ಲೀಗ ವೈರಾಣು ಸಕ್ರಿಯವಾಗಿರುವ 4,312, ಸೋಂಕಿತರಿದ್ದಾರೆ. ಕಳೆದ 24 ಗಂಟೆಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 

ಮಧ್ಯಪ್ರದೇಶದಲ್ಲಿ 4 ಸಾವು, ಮಹಾರಾಷ್ಟ್ರದಲ್ಲಿ 3, ರಾಜಸ್ಥಾನದಲ್ಲಿ 3 ಗುಜರಾತ್, ಒಡಿಶಾ, ಪಂಜಾಬ್ ನಲ್ಲಿ ತಲಾ ಒಂದು ಸಾವು ಸಂಭವಿಸಿದೆ. 

ಇನ್ನು ಮಹಾರಾಷ್ಟ್ರದಲ್ಲಿ 48 ಮಂದಿ ಕೊರೋನಾದಿಂದ ಮೃತಪಟ್ಟಿದ್ದರೆ, ಗುಜರಾತ್ ಮಧ್ಯಪ್ರದೇಶದಲ್ಲಿ ತಲಾ 13 ಜನರು ಪಂಜಾಬ್, ದೆಹಲಿಯಲ್ಲಿ ತಲಾ 7  ತಮಿಳುನಾಡಿನಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ 1018 ಕೊರೋನಾ ಸೋಂಕಿತ ಪ್ರಕರಣಗಳು

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು 1,018 ಕ್ಕೆ ಏರಿಕೆಯಾಗಿದ್ದು, ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ. ತಮಿಳುನಾಡಿನಲ್ಲಿ 621 ಪ್ರಕರಣಗಳಿದ್ದು, ದೆಹಲಿಯಲ್ಲಿ 576, ತೆಲಂಗಾಣದಲ್ಲಿ 364, ಕೇರಳದಲ್ಲಿ 327 ಕೋವಿಡ್ ಸೋಂಕಿತರಿದ್ದಾರೆ.

ಉತ್ತರ ಪ್ರದೇಶದಲ್ಲಿ 305, ರಾಜಸ್ಥಾನ-288, ಆಂಧ್ರಪ್ರದೇಶ-266, ಮಧ್ಯಪ್ರದೇಶ-229, ಕರ್ನಾಟಕದಲ್ಲಿ 175 ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com