'ನಿಮಗೂ ಕೊರೋನಾ ಬರಲಿ': ತನ್ನ ಪರ ತೀರ್ಪು ನೀಡದ ನ್ಯಾಯಾಧೀಶರಿಗೆ ವಕೀಲನ ಶಾಪ!

ತನ್ನ ಪರ ತೀರ್ಪು ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ವಕೀಲರೊಬ್ಬರು ನ್ಯಾಯಾಧೀಶರಿಗೆ ನಿಮಗೂ ಕೊರೋನಾ ವೈರಸ್ ಬರಲಿ ಎಂಬ ಶಾಪ ಹಾಕಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲ್ಕತ್ತಾ: ತನ್ನ ಪರ ತೀರ್ಪು ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ವಕೀಲರೊಬ್ಬರು ನ್ಯಾಯಾಧೀಶರಿಗೆ ನಿಮಗೂ ಕೊರೋನಾ ವೈರಸ್ ಬರಲಿ ಎಂಬ ಶಾಪ ಹಾಕಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕಕ್ಷಿದಾರರ ಪರವಾಗಿ ತೀರ್ಪು ಕೊಡಲಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಕೋಲ್ಕತಾ ಮೂಲದ ವಕೀಲ ಬಿಜೋಯ್ ಅಧಿಕಾರಿ ಅವರು ನ್ಯಾಯಮೂರ್ತಿಗಳಿಗೆ ಕೊರೋನಾ ವೈರಸ್ ಬರಲಿ ಎಂದು ಶಾಪ ಹಾಕಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ  ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇಷ್ಚಕ್ಕೂ ಏನಿದು ಪ್ರಕರಣ?
ದೇಶಾದ್ಯಂತ ಮಾರತ ಕೊರೋನಾ ವೈರಸ್ ಸೋಂಕು ನಿಂದಾಗಿ ಲಾಕ್ ಡೌನ್ ಹೇರಲಾಗಿದ್ದು, ದೇಶದ ಎಲ್ಲ ಕೋರ್ಟ್ ಗಳೂ ಕೂಡ ತುರ್ತು ಪ್ರಕರಣಗಳನ್ನು ಹೊರತು ಪಡಿಸಿ ಬೇರಾವುದೇ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಆದರೆ ಇತ್ತ ತನ್ನ  ಕಕ್ಷಿದಾರನ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸದೆ, ಆತನ ಪರವಾಗಿ ತೀರ್ಪು ನೀಡದ ನ್ಯಾಯಮೂರ್ತಿ ದೀಪಂಕರ್ ದತ್ತ ಅವರ ವಿರುದ್ಧ ಆಕ್ರೋಶ ಹೊರಹಾಕಿದ ವಕೀಲ ಬಿಜೋಯ್ ಅಧಿಕಾರಿ ಜಡ್ಜ್​ಗೆ ಕೊರೋನಾ ಸೋಂಕು ಬರಲಿ ಎಂದು ಶಾಪ ಹಾಕಿದ್ದಾರೆ.

ದೂರು ನೀಡಿದ ಜಡ್ಜ್, ಸ್ಪಷ್ಚನೆಗೆ ಗಡುವು
ಇನ್ನು ತಮ್ಮ ವಿರುದ್ಧ ಶಾಪ ಹಾಕಿದ ವಕೀಲ ಬಿಜೋಯ್ ಅಧಿಕಾರಿ ವಿರುದ್ಧ ಜಡ್ಜ್ ದೂರು ನೀಡಿಕೆಗೆ ಮುಂದಾಗಿದ್ದು, ವಕೀಲ ವೃತ್ತಿಯ ಘನತೆಯನ್ನು ಕಾಪಾಡದೆ, ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಕಾರಣಕ್ಕೆ ಮತ್ತು  ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನೆ  ಮಾಡಿದ್ದಕ್ಕೆ ಆ ವಕೀಲರ ವಿರುದ್ಧ ನ್ಯಾಯಮೂರ್ತಿಗಳು ದೂರು ದಾಖಲಿಸಿದ್ದಾರೆ. ಈ ನಡವಳಿಕೆಗೆ ಸ್ಪಷ್ಟನೆ ನೀಡಬೇಕೆಂದು ನ್ಯಾಯಮೂರ್ತಿ ದೀಪಂಕರ್ ದತ್ತ ಗಡುವು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿ, ತಕ್ಕ ಶಿಕ್ಷೆ ನೀಡಬೇಕೆಂದು ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com