ಮುಂಬೈನಲ್ಲಿ ಕೊರೋನಾ ಸಮುದಾಯ ಹಂತಕ್ಕೆ ತಲುಪಿದೆ: ಬಿಎಂಸಿ

ಮಹಾಮಾರಿ ಕೊರೋನಾ ವೈರಸ್'ಗೆ ಮುಂಬೈ ಕಂಗಾಲಾಗಿದ್ದು, ಇದೀಗ ವಾಣಿಜ್ಯ ನಗರಿಯಲ್ಲಿ ವೈರಸ್ ಸಮುದಾಯ ಹಂತ ತಲುಪಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಮಹಾಮಾರಿ ಕೊರೋನಾ ವೈರಸ್'ಗೆ ಮುಂಬೈ ಕಂಗಾಲಾಗಿದ್ದು, ಇದೀಗ ವಾಣಿಜ್ಯ ನಗರಿಯಲ್ಲಿ ವೈರಸ್ ಸಮುದಾಯ ಹಂತ ತಲುಪಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. 

ಮುಂಬೈನಲ್ಲಿ ಈ ವರಗೂ 525 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 34 ಜನರು ಸಾವನ್ನಪ್ಪಿದ್ದಾರೆ. 34 ಜನರ ಪೈಕಿ 11 ಮಂದಿ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ ಎಂದು ತಿಳಿದುಬಂದಿದೆ. 

ಮುಂಬೈನ ಸ್ಲಂ ನಿವಾಸಿಗಳಲ್ಲಿಯೇ ವೈರಸ್ ಹೆಚ್ಚು ಕಾಣಿಸಿಕೊಂಡಿದ್ದು, ಒಟ್ಟು 78 ಪ್ರಕರಣಗಳು ದಾಖಲಾಗಿವೆ. ವೊರ್ಲಿ, ಪ್ರಭಾದೇವಿ ಮತ್ತು ಪರೇಲ್ ನಲ್ಲಿರುವ ಫಿಶರ್ ಮೆನ್ ಕಾಲೋನಿಯಲ್ಲಿ ಸಾಕಷ್ಟು ಸೋಂಕಿತರಿದ್ದಾರೆ. 

ಧರವಿ, ಕುರ್ಲಾ, ನೆಹರು ನಗರ, ಬಾಂದ್ರಾ, ಅಂಧೇರಿಯಲ್ಲಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಇದೀಗ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರಲ್ಲಿಯೂ ವೈರಸ್ ಕಾಣಿಸಿಕೊಳ್ಳುತ್ತಿದ್ದು, ಸಾಕಷ್ಟು ಆತಂಕ ಶುರುವಾಗಿದೆ. 50ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈಗಾಗಲೇ ಮುಂಬೈನ ನಗರಲ್ಲಿ ವೈರಸ್ ಸಮುದಾಯ ಹಂತ ತಲುಪಿದೆ. ವಿದೇಶಗಳಿಗೆ ತೆರಳದೇ ಇದ್ದರೂ, ಸೋಂಕಿತರೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೂ ವ್ಯಕ್ತಿಗಳಲ್ಲಿ ವೈರಸ್ ಕಾಣಿಸಿಕೊಳ್ಳಲು ಆರಂಭಿಸಿದೆ. ಈಗಾಗಲೇ ಈ ಪ್ರದೇಶಗಳನ್ನು ಕಂಟಾಮಿನೇಟೆಡ್ ಕ್ಲಸ್ಟರ್ ಪ್ರದೇಶವೆಂದು ಘೋಷಣೆ ಮಾಡಲು ಚಿಂತನೆ ನಡೆಗಲು ನಡೆದಿವೆ.  ಈ ಪ್ರದೇಶಗಳನ್ನು ಶೀಘ್ರದಲ್ಲಿಯೇ ಸೀಲ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮಾತನಾಡಿ, ಸ್ಥಳೀಯ ಆಡಳಿತ ಮಂಡಳಿಗಳು ಪಿಡುಗು ದೂರಾಗಿಸಲು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಬಿಎಂಸಿ ಸಿಬ್ಬಂದಿಗಳ ಕಠಿಣ ಶ್ರಮದಿಂದಾಗಿ ಇತರೆ ಮೆಟ್ರೋಪಾಲಿಟಿನ್ ನಗರಗಳಿಗೆ ಹೋಲಿಕೆ ಮಾಡಿದರೆ, ಮುಂಬೈನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ ಎಂದು ಹೇಳಿದ್ದಾರೆ. 

ಈ ನಡುವೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆ ಅವರು ಧರವಿ ಹಾಗೂ ಇತರೆ ಕೊಳಚೆ ನಿವಾಸಿಗಳ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿಸಿದ್ದಾರೆ. ವೆಂಟಿಲೇಟರ್ ಹಾಗೂ ಪರೀಕ್ಷೆಗಳ ಸಂಖ್ಯೆ ಹೆಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ಪರೀಕ್ಷೆಗಳಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರಲಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com