ಕೋವಿಡ್-19: ದೆಹಲಿ ಪೊಲೀಸರಿಗೂ ತಟ್ಟಿದ ವೈರಸ್, ಹೊಸದಾಗಿ ಮತ್ತೆ 10 ಮಂದಿ ಬಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಯಾವುದನ್ನೂ ಲೆಕ್ಕಿಸದೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಭದ್ರತೆ ನೀಡುತ್ತಿದ್ದ ಪೊಲೀಸರಿಗೂ ಇದೀಗ ವೈರಸ್ ತಟ್ಟಿದೆ. ಅಲ್ಲದೆ, ಪುಣೆ ಹಾಗೂ ವೆಲ್ಲೂರ್ ನಲ್ಲಿ ಇಬ್ಬರು ವೈರಸ್'ಗೆ ಬಲಿಯಾಗಿದ್ದಾರೆ. ಇದರಂತೆ ದೇಶದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆಯಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಯಾವುದನ್ನೂ ಲೆಕ್ಕಿಸದೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಭದ್ರತೆ ನೀಡುತ್ತಿದ್ದ ಪೊಲೀಸರಿಗೂ ಇದೀಗ ವೈರಸ್ ತಟ್ಟಿದೆ. ಅಲ್ಲದೆ, ಪುಣೆ ಹಾಗೂ ವೆಲ್ಲೂರ್ ನಲ್ಲಿ ಇಬ್ಬರು ವೈರಸ್'ಗೆ ಬಲಿಯಾಗಿದ್ದಾರೆ. ಇದರಂತೆ ದೇಶದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 5,194ಕ್ಕೆ ತಲುಪಿದೆ. 

ದೆಹಲಿ ಸಂಚಾರ ಪೊಲೀಸ್ ವಿಭಾಗದ ಎಎಸ್ಐ ಒಬ್ಬರಲ್ಲಿ ವೈರಸ್ ದೃಢಪಟ್ಟಿದೆ. ಏಪ್ರಿಲ್ 7 ರಂದು ಇವರಲ್ಲಿ ಅತೀವ್ರ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಈ ನಡುವೆ ಪೊಲೀಸ್ ಇದ್ದ ಕಾಲೋನಿಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವೈರಸ್ ಕಾಣಿಸಿಕೊಂಡಿರುವ ಪೊಲೀಸ್ ಜೊತೆಗೆ ಸಂಪರ್ಕ ಹೊಂದಿದ್ದ ಇತರರ ಕುರಿತು ಹುಡುಕಾಟ ಆರಂಭಿಸಿದ್ದಾರೆ. 

ಈ ನಡುವೆ ತಮಿಳುನಾಡಿನ ವೆಲ್ಲೂರ್, ಪುಣೆಯಲ್ಲಿ ಇಬ್ಬರು ಹಾಗೂ ದೇಶದ ವಿವಿಧೆಡೆ 24 ಗಂಟೆಗಳಲ್ಲಿ ಹೊಸದಾಗಿ ಮಹಾಮಾರಿಗೆ 10 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 5,149ಕ್ಕೆ ಏರಿಕೆಯಾಗಿದೆ. 

ಪುಣೆಯಲ್ಲಿ ಕೊರೋನಾ ವೈರಸ್ ಜೊತಗೆ ಮತ್ತೊಂದು ಸೋಂಕಿನಿಂದ ಬಳಲುತ್ತಿದ್ದ 44 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇನ್ನು ತಮಿಳುನಾಡಿನ ವೆಲ್ಲೂರಿನಲ್ಲಿಯೂ 45 ವರ್ಷದ ವ್ಯಕ್ತಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದರಂತೆ ತಮಿಳುನಾಡು ರಾಜ್ಯದಲ್ಲಿ ವೈರಸ್'ಗೆ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com