ದೇಶದಿಂದ ಕೊರೋನಾ ಸಂಪೂರ್ಣ ನಶಿಸಿದಾಗಲೇ ವಿಮಾನಗಳ ಹಾರಾಟ ಮರು ಆರಂಭ: ಕೇಂದ್ರ ಸರ್ಕಾರ

ದೇಶದಲ್ಲಿ ಕೊರೋನಾ ಸೋಂಕು ಸಂಪೂರ್ಣ ನಾಶವಾದಾಗಲೇ ಮತ್ತೆ ವಿಮಾನಗಳ ಹಾರಾಟ ಪುನಾರಂಭಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಹರ್ದೀಪ್ ಸಿಂಗ್ ಪುರಿ
ಹರ್ದೀಪ್ ಸಿಂಗ್ ಪುರಿ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಸಂಪೂರ್ಣ ನಾಶವಾದಾಗಲೇ ಮತ್ತೆ ವಿಮಾನಗಳ ಹಾರಾಟ ಪುನಾರಂಭಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸ್ಪಷ್ಟನೆ ನೀಡಿದ್ದು, ಕೊರೋನಾ ವೈರಸ್ ಸೋಂಕಿನಿಂದಾಗಿಯೇ ದೇಶದಲ್ಲಿ ಎಲ್ಲ ರೀತಿಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ್ದು. ಹೀಗಾಗಿ ಮತ್ತೆ ದೇಶದಲ್ಲಿ ವಿಮಾನಗಳ ಹಾರಾಟ  ಪುನಾರಂಭಗೊಳ್ಳುವುದು ಕೊರೋನಾ ಸೋಂಕು ಸಂಪೂರ್ಣ ನಶಿಸಿದಾಗ ಮಾತ್ರ. ವೈರಸ್ ನಿಂದ ದೇಶದ ಜನತೆಗೆ ಯಾವುದೇ ರೀತಿಯ ಅಪಾಯ ಇಲ್ಲ ಎಂದಾಗ ಮಾತ್ರ ನಾಗರಿಕ ವಿಮಾನಯಾನ ಸೇವೆ ಆರಂಭಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ದೇಶದ ಜನತೆಗೆ ಧನ್ಯವಾದ ತಿಳಿಸಿರುವ ಪುರಿ, ಇಂತಹ ಸಂಕಷ್ಟದ ಸಮಯದಲ್ಲಿ ತಾಳ್ಮೆಯಿಂದ ಸರ್ಕಾರದೊಂದಿಗೆ ಸಹಕರಿಸುತ್ತಿದ್ದೀರಿ. ನಾವೆಲ್ಲರೂ ಒಗ್ಗೂಡಿ ಈ ಮಹಾಮಾರಿಯನ್ನು ಸೋಲಿಸೋಣ. ಅಂತೆಯೇ ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ನಾನು ದೇಶದ  ಜನತೆಯ ಬಳಿ ಕ್ಷಮೆ ಕೋರುತ್ತೇವೆ. ಆದರೆ ದೇಶದ ಜನರ ಜೀವ ರಕ್ಷಣೆಗಾಗಿ ಈ ನಿಯಮ ಅನಿವಾರ್ಯವಾದದ್ದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com