ಕೋವಿಡ್-19 ಪರೀಕ್ಷೆ ಶುಲ್ಕ ರಹಿತ ಮಾಡಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ 

ಕೋವಿಡ್-19 ಪರೀಕ್ಷೆಯನ್ನು ಶುಲ್ಕ ರಹಿತವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 

Published: 08th April 2020 11:17 PM  |   Last Updated: 08th April 2020 11:17 PM   |  A+A-


Supreme Court

ಸುಪ್ರೀಂ ಕೋರ್ಟ್

Posted By : Srinivas Rao BV
Source : PTI

ನವದೆಹಲಿ: ಕೋವಿಡ್-19 ಪರೀಕ್ಷೆಯನ್ನು ಶುಲ್ಕ ರಹಿತವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 

ಅನುಮೋದಿತ ಸರ್ಕಾರಿ ಪ್ರಯೋಗಾಲಯಗಳು ಅಥವಾ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್-19 ಪರೀಕ್ಷೆಯನ್ನು ಶುಲ್ಕ ರಹಿತ ಮಾಡಬೇಕು ಈ ಸಂಬಂಧ ಕೇಂದ್ರ ಸರ್ಕಾರ ತಕ್ಷಣವೇ ನಿರ್ದೇಶನ ಹೊರಡಿಸಬೇಕೆಂದು ಸೂಚನೆ ನೀಡಿದೆ. 

ಖಾಸಗಿ ಪ್ರಯೋಗಾಲಯಗಳು, ಖಾಸಗಿ ಆಸ್ಪತ್ರೆಗಳು ಪರೋಪಕಾರಕ್ಕಾಗಿ ಸೇವೆಗಳನ್ನು ಒದಗಿಸುವ ಮೂಲಕ ಕೋವಿಡ್-19 ಸೋಂಕು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ಹೊಂದಿವೆ ಎಂದು ಕೋರ್ಟ್ ಹೇಳಿದೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾ.ಅಶೋಕ್ ಭೂಷಣ್ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದ ಪೀಠ, ಕೋವಿಡ್-19 ಸಂಬಂಧಪಟ್ಟ ಪರೀಕ್ಷೆಗಳನ್ನು ಎನ್ಎಬಿಎಲ್ ಮಾನ್ಯತೆ ಪಡೆದ ಅಥವಾ ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ ನಿಂದ ಅನುಮೋದನೆ ಪಡೆದ ಪ್ರಯೋಗಾಲಯಗಳಲ್ಲಿ ನಡೆಸಬೇಕೆಂದು ಹೇಳಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp