ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್

ಒಡಿಶಾದಲ್ಲಿ ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಣೆ, ಜೂನ್ 17ರವರೆಗೂ ಶಾಲೆ, ಕಾಲೇಜು ಬಂದ್

ಒಡಿಶಾ ರಾಜ್ಯದಲ್ಲಿ ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಿಸಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಜೂನ್ 17 ರವರೆಗೆ ಶಾಲೆಗಳು ತೆರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಭುವನೇಶ್ವರ್: ಒಡಿಶಾ ರಾಜ್ಯದಲ್ಲಿ ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಿಸಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಜೂನ್ 17 ರವರೆಗೆ ಶಾಲೆಗಳು ತೆರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಒಡಿಶಾದಲ್ಲಿ ಇದುವರೆಗೆ  42 ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಇದೀಗ ದೇಶದಲ್ಲೇ ಲಾಕ್ ಡೌನ್ ವಿಸ್ತರಣೆ ಘೋಷಿಸಿದ ಮೊದಲ ರಾಜ್ಯ  ಎಂಬ ಹೆಗ್ಗಳಿಕೆಗೆ ಒಡಿಶಾ ಪಾತ್ರವಾಗಿದೆ.

ತಮ್ಮ ರಾಜ್ಯದಲ್ಲಿ ಏಪ್ರಿಲ್ 30 ರವರೆಗೆ ರೈಲು ಹಾಗೂ ವಿಮಾನ ಸೇವೆಯ ಸ್ಥಗಿತವನ್ನು ಮುಂದುವರಿಸುವಂತೆ ಪಟ್ನಾಯಕ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಸತತ ಹೋರಾಟ ಮುಂದುವರಿದಿದೆ. ಹಾಗಾಗಿ ಏಪ್ರಿಲ್ 14 ರ ನಂತರ ಲಾಕ್ ಡೌನ್ ವಿಸ್ತರಣೆ ಅನಿವಾರ್ಯವಾಗಬಹುದುಎಂದು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕಾಂಗ ಪಕ್ಷದ ಮುಖಂಡರಿಗೆ ಸೂಚಿಸಿದರು.

ಹಲವಾರು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಮತ್ತು ತಜ್ಞರು ಲಾಕ್ ಡೌನ್ ಅನ್ನು ವಿಸ್ತರಿಸುವಂತೆ ಕೋರಿದ್ದಾರೆ, ಪ್ರಸಕ್ತ ಪರಿಸ್ಥಿತಿಯನ್ನು ರಾಷ್ಟ್ರೀಯ ಹಾಗೂ ಸಾಮಾಜಿಕ ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ ಎಂದು ಮೋದಿ ಸಂಸತ್ತಿನನ ಸದಸ್ಯರಾದ ವಿವಿಧ ಪಕ್ಷಗಳ ಮುಖಂಡರಿಗೆ ತಿಳಿಸಿದರು. 

ದೇಶದಲ್ಲಿ ಮೂರು ವಾರಗಳ ಲಾಕ್‌ಡೌನ್ ಏಪ್ರಿಲ್ 14 ಕ್ಕೆ ಕೊನೆಗೊಳ್ಳಲಿದೆ.

Related Stories

No stories found.

Advertisement

X
Kannada Prabha
www.kannadaprabha.com