ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್ ಬಿಡೆನ್ ಗೆ ಬಿಟ್ಟುಕೊಟ್ಟ ಬೆರ್ನಿ ಸ್ಯಾಂಡರ್ಸ್!
ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್ ಬಿಡೆನ್ ಗೆ ಬಿಟ್ಟುಕೊಟ್ಟ ಬೆರ್ನಿ ಸ್ಯಾಂಡರ್ಸ್!

ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್ ಬಿಡೆನ್ ಗೆ ಬಿಟ್ಟುಕೊಟ್ಟ ಬೆರ್ನಿ ಸ್ಯಾಂಡರ್ಸ್! 

ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್ ನಿಂದ ಡೆಮಾಕ್ರೆಟಿಕ್ ಪಕ್ಷದ ಸೆನೆಟರ್ ಬೆರ್ನಿ ಸ್ಯಾಂಡರ್ಸ್ ಹಿಂದೆ ಸರಿದಿದ್ದಾರೆ. 

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್ ನಿಂದ ಡೆಮಾಕ್ರೆಟಿಕ್ ಪಕ್ಷದ ಸೆನೆಟರ್ ಬೆರ್ನಿ ಸ್ಯಾಂಡರ್ಸ್ ಹಿಂದೆ ಸರಿದಿದ್ದಾರೆ. 

ಬೆರ್ನಿ ಸ್ಯಾಂಡರ್ಸ್ ನ ನಡೆಯಿಂದ ಡೆಮಾಕ್ರೆಟಿಕ್ ಪಕ್ಷದ ಮತ್ತೋರ್ವ ಆಕಾಂಕ್ಷಿ, ಅಮೆರಿಕಾದ ಮಾಜಿ ಉಪಾಧ್ಯಕ್ಷ ಜೋಯ್ ಬಿಡೆನ್ ಡೆಮಾಕ್ರೆಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗುವುದು ಬಹುತೇಕ ಖಾತ್ರಿಯಾಗಿದೆ.  

ನವೆಂಬರ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಡೆಯಲಿದ್ದು, ರಿಪಬ್ಲಿಕನ್ ಪಕ್ಷದ, ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್ ಪಕ್ಷದ ಜೋಯ್ ಬಿಡೆನ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. 

ಇಂದು ನಾನು ನನ್ನ ಪ್ರಚಾರವನ್ನು ನಿಲ್ಲಿಸುತ್ತೇನೆ, ಪ್ರಚಾರ ಕೊನೆಗೊಳ್ಳುವಾಗ ನ್ಯಾಯಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದು 78 ವರ್ಷದ ಬೆರ್ನಿ ಸ್ಯಾಂಡರ್ಸ್ ಹೇಳಿದ್ದಾರೆ. ಬಿಡೆನ್ ವಿರುದ್ಧದ ಪ್ರಾಥಮಿಕ ಚುನಾವಣೆಗಳಲ್ಲಿ ಬೆರ್ನಿ ಸ್ಯಾಂಡರ್ಸ್ ಗೆ ಉತ್ತಮ ಲಕ್ಷಣಗಳು ಕಾಣದ ಕಾರಣ ಅವರು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆಸರಿಯುವುದು ನಿರೀಕ್ಷಿತವಾಗಿತ್ತು. ಇದೇ ವೇಳೆ ಬಿಡೆನ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾವು ಒಗ್ಗಟ್ಟಿನಿಂದ ಟ್ರಂಪ್ ನ್ನು ಮಣಿಸುತ್ತೇವೆ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com