ಲಾಕ್ ಡೌನ್: ಪತ್ನಿಯ ಕಿಮೋಥೆರಪಿಗಾಗಿ 130 ಕಿ.ಮೀ. ಸೈಕಲ್ ತುಳಿದ 65 ವರ್ಷದ ವ್ಯಕ್ತಿ!

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಸಾರಿಗೆ ಇಲ್ಲದೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಸಾರಿಗೆ ಇಲ್ಲದೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿದ್ದ 65 ವರ್ಷದ ವ್ಯಕ್ತಿಯೊಬ್ಬ ಕ್ಯಾನ್ಸರ್ ನಿಂದ ಬಳಲುತ್ತಿರುವ ತನ್ನ ಪತ್ನಿಗೆ ಕಿಮೋಥೆರಪಿ ಕೊಡಿಸುವುದಕ್ಕಾಗಿ ಸುಮಾರು 130 ಕಿ.ಮೀ. ಸೈಕಲ್ ತುಳಿದಿದ್ದಾರೆ.

ಅರಿವಾಜಗನ್ ಎಂಬ ವ್ಯಕ್ತಿ ತನ್ನ 60 ವರ್ಷದ ಪತ್ನಿ ಮಂಜುಳಾ ಅವರನ್ನು ಸೈಕಲ್‌ ಮೇಲೆ ಕೂರಿಸಿಕೊಂಡು ಕುಂಬಕೋಣಂ ಬಳಿಯ ತನ್ನ ಹಳ್ಳಿಯಿಂದ ಪುದುಚೇರಿಯ ಜೆಐಪಿಎಇಆರ್ ಆಸ್ಪತ್ರೆಗೆ ಕಿಮೋಥೆರಪಿಗಾಗಿ ಕರೆದೊಯ್ದಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪುದುಚೇರಿ ನಡುವೆ ಯಾವುದೇ ಬಸ್ ಗಳು ಸಂಚರಿಸುತ್ತಿಲ್ಲ. ಹೀಗಾಗಿ ಅರಿವಾಜಗನ್ ಅವರು ಮಾರ್ಚ್ 30ರಂದು ಕಿಮೋಥೆರಪಿಗಾಗಿ ತನ್ನ ಪತ್ನಿಯನ್ನು ಸೈಕಲ್ ಮೇಲೆ ಕರೆದುಕೊಂಡು ಹೋಗಲು ನಿರ್ಧರಿಸಿದರು. 

ಮಾರ್ಚ್ 30ರಂದು ಬೆಳಗ್ಗೆ 4.45ಕ್ಕೆ ನಾವು ನಮ್ಮ ಪ್ರಯಾಣ ಆರಂಭಿಸಿ, ರಾತ್ರಿ 10.15ಕ್ಕೆ ಜೆಐಪಿಎಇಆರ್ ಆಸ್ಪತ್ರೆ ತಲುಪಿದೆವು. ದಾರಿ ಮಧ್ಯ ಟೀ ಕುಡಿದು ಸ್ವಲ್ಪ ವಿರಮಿಸಿದೆವು ಮತ್ತು ಒಂದು ಕೊಳದ ಬಳಿ ಸುಮಾರು ಎರಡು ಗಂಟೆಗಳ ಕಾಲ ಮಲಗಿದೆವು ಎಂದು ಅರಿವಾಜಗನ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಾರನೇ ದಿನ ಕಿಮೋಥೆರಪಿಯ ನಂತರ ಈ ದಂಪತಿಯನ್ನು ನಾವು ನಮ್ಮ ಆಂಬುಲೆನ್ಸ್ ಕುಂಬಕೋಣಂಗೆ ಕಳುಹಿಸಿಕೊಟ್ಟೆವು ಎಂದು ಜೆಐಪಿಎಂಇಆರ್ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com