ಉತ್ತರ ಪ್ರದೇಶ: ಬೈಸಿಕಲ್ ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಗೆ ರಸ್ತೆಯಲ್ಲೇ ಹೆರಿಗೆ

ಆಸ್ಪತ್ರೆಗೆ ಸೈಕಲ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರು ನಡು ರಸ್ತೆಯಲ್ಲೆ ಮಗುವಿಗೆ ಜನ್ಮ ನೀಡಿದ್ದಾರೆ. ಉತ್ತರ ಪ್ರದೇಶದ ರಘುನಾಥಪುರ ನಿವಾಸಿಯನ್ನು ಏಪ್ರಿಲ್ 9 ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಸಿಕಲ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಷಹಜಹಾನ್ ಪುರ: ಆಸ್ಪತ್ರೆಗೆ ಸೈಕಲ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರು ನಡು ರಸ್ತೆಯಲ್ಲೆ ಮಗುವಿಗೆ ಜನ್ಮ ನೀಡಿದ್ದಾರೆ.

ಉತ್ತರ ಪ್ರದೇಶದ ರಘುನಾಥಪುರ ನಿವಾಸಿಯನ್ನು ಏಪ್ರಿಲ್ 9 ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಸಿಕಲ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. 

ಅವರ ಗ್ರಾಮದಿಂದ ಆಸ್ಪತ್ರೆ 10 ಕಿಮೀ ದೂರವಿದ್ದು, 5 ಕಿಮೀ ಬಂದಿದ್ದರು,  ಸಿಕಂದರ್ ಪುರ ಕ್ರಾಸ್ ಗೆ ಬರುವ ವೇಳೆ ಮಹಿಳೆಗೆ ಹೆರಿಗೆ ನೋವು ತೀವ್ರಗೊಂಡು ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನು ನೋಡಿದ ದಾರಿ ಹೋಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರೆ,  ಪೊಲೀಸ್ ವಾಹನದಲ್ಲಿ ಮಗು ಮತ್ತು ತಾಯಿನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com