ಲಾಕ್ ಡೌನ್: ಸಂಕಷ್ಟದಲ್ಲಿರುವ ಆಟೋ, ಇ-ರಿಕ್ಷಾ, ಫಟ್ ಫಟ್ ಸೇವಾ ಚಾಲಕರಿಗೆ 5000 ರೂ. ಸಹಾಯಧನ: ಕೇಜ್ರಿವಾಲ್

ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ 5000 ರೂಪಾಯಿ ನೆರವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ. 
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ 5000 ರೂಪಾಯಿ ನೆರವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ. 

ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ತ ಪರವಾನಗಿ ಹೊಂದಿದ ಟ್ಯಾಕ್ಸಿ, ಆಟೋ ರಿಕ್ಷಾ, ಇ – ರಿಕ್ಷಾ, ಗ್ರಾಮಿಣ್ ಮತ್ತು ಫಟ್  ಫಟ್ ಸೇವಾ ಚಾಲಕರಿಗೆ ಸೋಮವಾರದಿಂದ ನೆರವು ಸಿಗಲಿದೆ.

ಲಾಕ್ ಡೌನ್ ನಿಂದಾಗಿ ಅನೇಕ ಟ್ಯಾಕ್ಸಿ, ಆಟೋ ರಿಕ್ಷಾ, ಇ–ರಿಕ್ಷಾ, ಗ್ರಾಮಿಣ್ ಮತ್ತು ಫಟ್  ಫಟ್ ಸೇವಾ ಚಾಲಕರ ಜೀವನ ದುಃಸ್ತರವಾಗಿರುವ ಕಾರಣ ಅವರ ಕುಟುಂಬಕ್ಕೆ ನೆರವಾಗಲು 5000 ರೂ ಪರಿಹಾರ ನೀಡಲಾಗುವುದು. ಸೋಮವಾರದಿಂದ ಅರ್ಹ ಚಾಲಕರು ಸಾರಿಗೆ ಇಲಾಖೆ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದು. ಆಧಾರ್ ಆಧರಿತ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದರು. ಕಟ್ಟಡ ಕಾರ್ಮಿಕರಿಗೂ 5 ಸಾವಿರ ರೂ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮಾರಕ ಕೊರೋನಾ ವೈರಸ್ ಗೆ ದೇಶದಲ್ಲಿ ಮತ್ತೆ 35 ಸಾವು ಸಂಭವಿಸಿದ್ದು, ಆ ಮೂಲಕ ದೇಶದಲ್ಲಿ ಕೋವಿಡ್-19ಗೆ ಸಾವನ್ನಪ್ಪಿದವರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com