ಆಂಧ್ರಪ್ರದೇಶದಲ್ಲಿ ಮೊದಲ ಸಾವಯವ ಸೋಂಕು ನಿವಾರಕ ಸುರಂಗ!

ಆಂಧ್ರಪ್ರದೇಶದ  ಅನಂತಪುರ ಜಿಲ್ಲೆಯಲ್ಲಿ  ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅನಂತಪುರ: ಆಂಧ್ರಪ್ರದೇಶದ  ಅನಂತಪುರ ಜಿಲ್ಲೆಯಲ್ಲಿ  ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ.

ಕರ್ನಾಟಕದಲ್ಲಿ ಸುಗರಾಧಾನಾ ಯೋಜನೆ ನಡೆಸುತ್ತಿರುವ ಡಾ. ಕಾರ್ತಿಕ್ ನಾರಾಯಣ್ ಅವರ ಬೆಂಬಲದೊಂದಿಗೆ ಪೆಣುಕೊಂಡದ ಸಬ್ ಕಲೆಕ್ಟರ್ ಈ ಸೋಂಕು ನಿವಾರಕ ನಿರ್ಮಾಣಕ್ಕೆ ಗಮನ ಹರಿಸಿದ್ದಾರೆ. 

ಹಿಂದೂಪುರದಲ್ಲಿಯೂ ಇಂತಹ ಮೂರು ಸೋಂಕು ನಿವಾರಕ ಸುರಂಗಗಳನ್ನು ನಿರ್ಮಿಸಲಾಗಿದೆ. ಈ ಸುರಂಗಗಳಲ್ಲಿ ಮಾರ್ಗದಲ್ಲಿ 
ಸೋಡಿಯಂ ಹೈಪೋಕ್ಲೋರೈಟ್ ಬದಲಿಗೆ, ಸಿಟ್ರೊಬಿಯೊಶೀಲ್ಡ್ ದ್ರಾವಣವನ್ನು ಬಳಸಲಾಗುತ್ತದೆ. 

ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ  ಧೂಮಪಾನ ಸಂಬಂಧಿತ ರೋಗಿಗಳಿಗೆ ಪರಿಹಾರ ನೀಡುವಲ್ಲಿ ಈ ದ್ರಾವಣವನ್ನು ಬಳಸಲಾಗುತಿತ್ತು.  ಇದನ್ನು ಜನರ ಮೇಲೆ ಸಿಂಪಡಿಸಿದರೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ತಿಳಿದುಬಂದಿದೆ. 

ಸೋಡಿಯಂ ಹೈಪೋಕ್ಲೊರೈಟ್ ಬಳಕೆಯಿಂದ ಮೂಗಿನ ಸಮಸ್ಯೆ, ಗಂಟಲು ನೋವು, ಕೆಮ್ಮು, ಮತ್ತಿತರ ಸಮಸ್ಯೆಗಳು ಉಂಟಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com