ಪಂಜಾಬ್: ಒಂದೇ ಗ್ರಾಮದ 38 ಮಂದಿಗೆ ಕೊರೋನಾ, ಈ ಪೈಕಿ ಎರಡು ಕುಟುಂಬದ 28 ಮಂದಿಗೆ ಪಾಸಿಟಿವ್!

ಪಂಜಾಬ್ ನ ಮೊಹಾಲಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಪಂಜಾಬ್ ನ ಮೊಹಾಲಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. 

ಕೊರೋನಾ ಹಾಟ್ ಸ್ಪಾಟ್ ಆಗಿರುವ ಮೊಹಾಲಿ ಜಿಲ್ಲೆಯ ಜವಾಹರ್ಪುರ್ ಗ್ರಾಮದಲ್ಲಿ ಒಟ್ಟು 38 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಪರಸ್ಪರ ಸಂಬಂಧಿಯಾಗಿರುವ ಎರಡು ಕುಟುಂಬದ 28 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಗ್ರಾಮದ ಮಹಿಳಾ ಸರ್ಪಂಚ್ ಹಾಗೂ ಪಂಚ್ ಅವರ ವಿಸ್ತೃತ ಕುಟುಂಬಗಳು 28 ಪಾಸಿಟಿವ್ ಪ್ರಕರಣಗಳನ್ನು ಹೊಂದಿದ್ದು ಈ ಇಬ್ಬರೂ ಸೋದರಸಂಬಂಧಿಗಳು ಎಂದು ತಿಳಿದುಬಂದಿದೆ. 

ಇಂದು ಈ ಹಳ್ಳಿಯ 56 ವರ್ಷದ ಮಹಿಳೆಗೆ ಕೊರೋನಾ ವೈರಸ್‌ ಪಾಸಿಟಿವ್ ದೃಢಪಟ್ಟಿದ್ದು, ಅವರ ಕುಟುಂಬ ಸದಸ್ಯರಿಗೆ ಈಗಾಗಲೇ ಪಾಸಿಟಿವ್ ಬಂದಿದೆ. ಇದರೊಂದಿಗೆ, ಜವಾಹರ್ಪುರ್ ಗ್ರಾಮದಲ್ಲಿ ಒಟ್ಟು ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 38ಕ್ಕೆ ತಲುಪಿದೆ. ಈ 38 ಪಾಸಿಟಿವ್ ಪ್ರಕರಣಗಳಲ್ಲಿ, ಯಾರಿಗೂ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಇವರಲ್ಲಿ ಹೆಚ್ಚಿನವರಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೆ ಕೊವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಆದರೆ ಕೆಲವು ತಬ್ಲಿಘಿ ಜಮಾತ್ ಸದಸ್ಯರು ಹಳ್ಳಿಯಲ್ಲಿಯೇ ಇದ್ದರು ಎಂಬ ಮಾಹಿತಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com