ಕೊವಿಡ್-19: ಮುಂಬೈನ ಧಾರಾವಿಯಲ್ಲಿ ಮತ್ತೆ ಇಬ್ಬರು ಬಲಿ, ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ

ಮುಂಬೈನ ಧಾರಾವಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಮಂಗಳವಾರ ಮತ್ತೆ ಇಬ್ಬರು ಬಲಿಯಾಗಿದ್ದು, ಏಷ್ಯಾದ ಅತಿ ದೊಡ್ಡ ಸ್ಲಂನಲ್ಲಿ ಮತ್ತೆ ಆರು ಮಂದಿಗೆ ಕೊವಿಡ್-19 ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ಧಾರಾವಿ
ಧಾರಾವಿ

ಮುಂಬೈ: ಮುಂಬೈನ ಧಾರಾವಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಮಂಗಳವಾರ ಮತ್ತೆ ಇಬ್ಬರು ಬಲಿಯಾಗಿದ್ದು, ಏಷ್ಯಾದ ಅತಿ ದೊಡ್ಡ ಸ್ಲಂನಲ್ಲಿ ಮತ್ತೆ ಆರು ಮಂದಿಗೆ ಕೊವಿಡ್-19 ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಇಂದು ಧಾರಾವಿಯಲ್ಲಿ ಹೊಸದಾಗಿ 6 ಸೋಂಕಿತರು ಪತ್ತೆಯಾಗಿದ್ದು, ಮುಸ್ಲಿಂ ನಗರ, ಕಲ್ಯಾಣವಾಡಿ, ಜನತಾ ಸೊಸೈಟಿ ಹಾಗೂ ರಾಜೀವ ನಗರದ ಪ್ರದೇಶದ ಆರು ಮಂದಿಗೆ ಪಾಸಿಟಿವ್ ಬಂದಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. 

ಮಹಾಮಾರಿ ವೈರಸ್‌ಗೆ ಇಂದು ಇಬ್ಬರು ಬಲಿಯಾಗಿದ್ದು, ಇದರೊಂದಿಗೆ ಧಾರಾವಿಯಲ್ಲಿ ಇದುವರೆಗೆ ಏಳು ಜನರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಈವರೆಗೆ 2,455 ಇದ್ದು, ಮುಂಬೈ ಮಹಾ ನಗರದಲ್ಲೇ 1540 ಕೊರೋನಾ ವೈರಸ್‌ ಸೋಂಕಿತರು ಪತ್ತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com