ಕೋವಿಡ್ ಎಫೆಕ್ಟ್: ರಾಫೆಲ್ ಫೈಟರ್ ಜೆಟ್ ವಿತರಣೆ 'ಕೆಲ ವಾರಗಳಷ್ಟು' ಮುಂದಕ್ಕೆ

ಫ್ರಾನ್ಸ್ ಮತ್ತು ಭಾರತ ಎರಡೂ ರಾಷ್ಟ್ರಗಳಲ್ಲಿ ಕೊರೋನಾವೈರಸ್  ಲಾಕ್‌ಡೌನ್ ಇರುವ ಕಾರಣ ಮೊದಲ ಹಂತದ ರಾಫೆಲ್ ಯುದ್ಧ ವಿಮಾನಗಳ ವಿತರಣೆಯು ಈಗ ಕೆಲವು ವಾರಗಳ ವಿಳಂಬವಾಗಲಿದೆ. 
ರಾಫೆಲ್ ಫೈಟರ್ ಜೆಟ್
ರಾಫೆಲ್ ಫೈಟರ್ ಜೆಟ್

ನವದೆಹಲಿ: ಫ್ರಾನ್ಸ್ ಮತ್ತು ಭಾರತ ಎರಡೂ ರಾಷ್ಟ್ರಗಳಲ್ಲಿ ಕೊರೋನಾವೈರಸ್  ಲಾಕ್‌ಡೌನ್ ಇರುವ ಕಾರಣ ಮೊದಲ ಹಂತದ ರಾಫೆಲ್ ಯುದ್ಧ ವಿಮಾನಗಳ ವಿತರಣೆಯು ಈಗ ಕೆಲವು ವಾರಗಳ ವಿಳಂಬವಾಗಲಿದೆ.

"ಪ್ರಸ್ತುತ, ಲಾಕ್ ಡೌನ್ ಕಾರಣ ವಿತರಣಾ ವೇಳಾಪಟ್ಟಿಯನ್ನು ಕೆಲವು ವಾರಗಳ ಕಾಲ ಮುಂದಕ್ಕೆ ಹಾಕಲಾಗಿದೆ.ದರೆ ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ಐಎಎಫ್ ಮೂಲಗಳು ಇಲ್ಲಿ ತಿಳಿಸಿವೆ. ಫ್ರಾನ್ಸ್‌ನಿಂದ ವಿತರಣೆಯಲ್ಲಿನ ವಿಳಂಬದ ಹೊರತಾಗಿ, ಅಂಬಾಲಾ ವಾಯುನೆಲೆಯಲ್ಲಿ ಇನ್ನೂ ಕೆಲವು ಸಿದ್ಧತೆಗಳು ಪೂರ್ಣಗೊಂಡಿಲ್ಲ, ಇದು ಫ್ರೆಂಚ್ ಮೂಲದ ಫೈಟರ್ ಗಳಿಗಾಗಿ ಮೊದಲ ಸ್ಕ್ವಾಡ್ರನ್ ಅನ್ನು ನಿರ್ಮಿಸಲಿದೆ.

ಈ ಮುನ್ನಿನ ಒಪ್ಪಂದದಂತೆ ವಿಮಾನವು ಮೇ ಅಂತ್ಯದ ವೇಳೆಗೆ ಭಾರತವನ್ನು ತಲುಪಬೇಕಿತ್ತು ಆದರೆ ಈಗ ಕೆಲವು ವಾರಗಳ ವಿಳಂಬವಾಗಲಿದೆ. ಲಾಕ್‌ಡೌನ್‌ಗಳು ಮುಗಿದ ನಂತರವೇ ಅಂತಿಮ ವಿತರಣಾ ವೇಳಾಪಟ್ಟಿ ನಿರ್ಧಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com