ಡೂಡಲ್ ಮೂಲಕ ಪ್ಯಾಕೇಜಿಂಗ್, ಶಿಪ್ಪಿಂಗ್ ಮತ್ತು ವಿತರಕರಿಗೆ ಗೌರವ ಸಲ್ಲಿಸಿದ ಗೂಗಲ್

ವಿಶೇಷ ಸಂದರ್ಭಗಳಲ್ಲಿ ಗೂಗಲ್ ತನ್ನ ವಿಶಿಷ್ಟ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಸುವುದು, ಶುಭಾಶಯ ತಿಳಿಸುವ ಮೂಲಕ ಜನರ ಗಮನ ಸೆಳೆಯುವದು ಸಾಮಾನ್ಯ. ಅದರಂತೆ ಈ ಬಾರಿ ಕೊರೋನಾ ವೈರಸ್ ಸಮಯದಲ್ಲಿಯೂ ಆರೋಗ್ಯ ರಕ್ಷಕರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶೇಷ ಸಂದರ್ಭಗಳಲ್ಲಿ ಗೂಗಲ್ ತನ್ನ ವಿಶಿಷ್ಟ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಸುವುದು, ಶುಭಾಶಯ ತಿಳಿಸುವ ಮೂಲಕ ಜನರ ಗಮನ ಸೆಳೆಯುವದು ಸಾಮಾನ್ಯ. ಅದರಂತೆ ಈ ಬಾರಿ ಕೊರೋನಾ ವೈರಸ್ ಸಮಯದಲ್ಲಿಯೂ ಆರೋಗ್ಯ ರಕ್ಷಕರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಗೂಗಲ್ ಮಾಡಿದ್ದು, ಇದೀಗ ಪ್ಯಾಕೇಜಿಂಗ್, ಶಿಪ್ಪಿಂಗ್ ಮತ್ತು ವಿತರಣಾ ಸೇವೆ ಸಲ್ಲಿಸುತ್ತಿರುವವರಿಗೆ ಗೂಗಲ್ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಸಿದೆ. 

ಮಹಾಮಾರಿ ಕೊರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್'ಡೌನ್ ಆಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ಸಂದರ್ಭದಲ್ಲಿ ಜನರಿಗೆ ಅಗತ್ಯವಸ್ತುಗಳನ್ನು ಪ್ಯಾಕ್ ಮಾಡಿ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಿ ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಸಾಕಷ್ಟು ಜನರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರಿಗೆ ಗೌರವ ಸಲ್ಲಿಸುವ ಸಲುವಾಗಿ ಗೂಗಲ್ ಡೂಡಲ್ ಮೂಲಕ ನಮನ ಸಲ್ಲಿಸಿದೆ. 

ಈ ಹಿಂದೆ ಗೂಗಲ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ವೈರಸ್ ವಿರುದ್ಧ ದಿಟ್ಟ ಹೋರಾಟ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಗೌರವ ಸಲ್ಲಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com