ಈ ವರ್ಷ ಸಾಮಾನ್ಯ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ: ಐಎಂಡಿ

ಈ ವರ್ಷ ನೈರುತ್ಯ ಮಾನ್ಸೂನ್ ಸಾಮಾನ್ಯವಾಗಿದ್ದು, ವಾಡಿಕೆಯಂತೆ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಬುಧವಾರ ಹೇಳಿದೆ. ಇದು ದೇಶದ ರೈತರಲ್ಲಿ ಭರವಸೆ ಮೂಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈ ವರ್ಷ ನೈರುತ್ಯ ಮಾನ್ಸೂನ್ ಸಾಮಾನ್ಯವಾಗಿದ್ದು, ವಾಡಿಕೆಯಂತೆ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಬುಧವಾರ ಹೇಳಿದೆ. ಇದು ದೇಶದ ರೈತರಲ್ಲಿ ಭರವಸೆ ಮೂಡಿಸಿದೆ.

ಈ ವರ್ಷ ದೀರ್ಘಾವಧಿಯ ಸರಾಸರಿ ಮಳೆ ಶೇ. 100 ಮಳೆಯಾಗುವ ಸಾಧ್ಯತೆ ಇದೆ. ಇದನ್ನು ಸಾಮಾನ್ಯವೆಂದು ಪರಿಗಣಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎಂ. ಮಹಾಪತ್ರ ಅವರು ಆನ್ ಲೈನ್ ಮೂಲಕ ತಿಳಿಸಿದ್ದಾರೆ.

ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮಳೆಯಾಗಲಿದೆ ಎಂದು ಮಹಾಪತ್ರ ಅವರು ಹೇಳಿದ್ದಾರೆ.

ಐಎಂಡಿ ದೇಶದಲ್ಲಿ ಮುಂಗಾರು ಆರಂಭವಾಗುವ ಮತ್ತು ಅಂತ್ಯಗೊಳ್ಳುವ ದಿನಾಂಕಗಳನ್ನು ಪರಿಸ್ಕರಿಸಲಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ ರಾಜೀವ್ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿ ಮುಂಗಾರು ಮಳೆ ಪ್ರಮಾಣ 96 ಪರ್ಸೆಂಟ್‌ನಿಂದ 104 ಪರ್ಸೆಂಟ್‌ ನಡುವೆ ಇದೆ. ಈ ವರ್ಷ ಇದರ ಪ್ರಮಾಣ ಶೇ.100ರಷ್ಟು ನಿರೀಕ್ಷಿಸಲಾಗಿದೆ. ನಾಲ್ಕು ತಿಂಗಳ ಅವಧಿಯ ಮುಂಗಾರು ಜೂನ್‌ನಿಂದ ಆರಂಭಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com