ರೋಹ್ಟಕ್: ಮೆಕ್ಸಿಕನ್ ಯುವತಿ- ಸ್ಥಳೀಯ ಯುವಕನ ವಿವಾಹಕ್ಕೆ ನೆರವಾಗಲು ರಾತ್ರಿ ತೆರೆದ ಕೋರ್ಟ್ ಬಾಗಿಲು! 

ಭಾಷಾ ಆಪ್ ನಲ್ಲಿ ಪರಿಚಯವಾಗಿದ್ದ ಮೆಕ್ಸಿಕನ್ ಯುವತಿಯನ್ನು ಸ್ಥಳೀಯ ಯುವಕ ವಿವಾಹವಾಗುವುದಕ್ಕೆ ನೆರವಾಗಲು ಜಿಲ್ಲಾ ಮ್ಯಾಜಿಸ್ಟ್ರ‍ೇಟ್ ಕೋರ್ಟ್ ರಾತ್ರಿ ವೇಳೆ ಕೋರ್ಟ್ ಬಾಗಿಲು ತೆರೆದಿದೆ. 

ಲಾಕ್ ಡೌನ್ ಪರಿಣಾಮ ವಿವಾಹ ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಶೇಷ ವಿವಾಹ ಕಾಯ್ದೆಯ ಅನುಗುಣವಾಗಿ ಮದುವೆ ನಡೆಯಲು ಕೋರ್ಟ್ ಅನುವು ಮಾಡಿಕೊಟ್ಟಿದೆ. 

2017 ರಲ್ಲಿ ರೋಹ್ಟಕ್ ನ ನಿವಾಸಿ   ಹಾಗೂ ಮೆಕ್ಸಿಕೋದ ಡ್ಯಾನಾ ಜೊಹೆರಿ ಆಲಿವೆರೋಸ್ ಪರಿಚಯವಾಗಿದ್ದರು. 2018 ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಫೆ.17 ರಂದು ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಲು ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಮೆಕ್ಸಿಕೋ ಯುವತಿ ಹಾಗೂ ಆಕೆಯ ತಾಯಿ ಇಬ್ಬರೂ ವಿವಾಹಕ್ಕಾಗಿ ಭಾರತಕ್ಕೆ ಆಗಮಿಸಿದ್ದರು. ಮದುವೆಗೆ ಮಾ.18 ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಲಾಕ್ ಡೌನ್ ಪರಿಣಾಮ ವಿವಾಹ ನಡೆಯಲಿಲ್ಲ. 

ಪ್ರೇಮಿಗಳು ವಿವಾಹವಾಗುವುದಕ್ಕೆ ಸಹಾಯ ಮಾಡಿದ ಅಡ್ವೊಕೇಟ್ ನಿರಂಜನ್ ಕಶ್ಯಪ್ ಈ ಬಗ್ಗೆ ಮಾತನಾಡಿದ್ದು, " ಇಬ್ಬರೂ ಸಹಾಯ ಕೇಳಿ ಬಂದಿದ್ದರು. ಯುವತಿ ಮೆಕ್ಸಿಕೋದವಳಾದ್ದರಿಂದ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನಡೆಯಬೇಕಿತ್ತು. ಜಿಲ್ಲಾ ಮ್ಯಾಜಿಸ್ಟ್ರ‍ೇಟ್ ನ್ಯಾಯಾಲಯವನ್ನು ಸಂಪರ್ಕಿಸಿ, ಮೆಕ್ಸಿಕೋ ರಾಯಭಾರಿ ಕಚೇರಿಯಿಂದ ನಿರಾಕ್ಷೇಪಣಾ ಪತ್ರವನ್ನು ತೆಗೆದುಕೊಳ್ಳಲಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಏ.13 ರಂದು ರಾತ್ರಿ 8 ಕ್ಕೆ ವಿವಾಹ" ನಡೆಯಿತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com