ಪಾಕ್‌ನ ದುಷ್ಟಬುದ್ಧಿಯ ನಡುವೆ ಪಾಕ್ ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿಸಲು ಭಾರತ ಸಿದ್ಧತೆ!

ಮಹಾಮಾರಿ ಕೊರೋನಾ ಹರಡುವಿಕೆಯಿಂದ ತಪ್ಪಿಸಿಕೊಳ್ಳಲು ಭಾರತ ಏನೆಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಈ ನಡುವೆ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಾ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತ್ತಿದೆ. ಇಂತಹ ಸಂದರ್ಭದಲ್ಲೂ ಭಾರತದಲ್ಲಿ ಸಿಲುಕಿರುವ ಪಾಕ್ ಪ್ರಜೆಗಳನ್ನು ಮರಳಿಸಲು ಭಾರತ ಸಿದ್ಧತೆ ನಡೆಸಿದೆ.
ನರೇಂದ್ರ ಮೋದಿ-ಇಮ್ರಾನ್ ಖಾನ್
ನರೇಂದ್ರ ಮೋದಿ-ಇಮ್ರಾನ್ ಖಾನ್

ನವದೆಹಲಿ: ಮಹಾಮಾರಿ ಕೊರೋನಾ ಹರಡುವಿಕೆಯಿಂದ ತಪ್ಪಿಸಿಕೊಳ್ಳಲು ಭಾರತ ಏನೆಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಈ ನಡುವೆ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಾ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತ್ತಿದೆ. ಇಂತಹ ಸಂದರ್ಭದಲ್ಲೂ ಭಾರತದಲ್ಲಿ ಸಿಲುಕಿರುವ ಪಾಕ್ ಪ್ರಜೆಗಳನ್ನು ಮರಳಿಸಲು ಭಾರತ ಸಿದ್ಧತೆ ನಡೆಸಿದೆ. 

ದೇಶಾದ್ಯಂತ ಲಾಕ್ ಡೌನ್ ಅನ್ನು ವಿಸ್ತರಿಸಲಾಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಮುಚ್ಚಲಾಗಿದೆ. ಇನ್ನು ಭಾರತದಲ್ಲಿ 180ಕ್ಕೂ ಹೆಚ್ಚು ಪಾಕಿಸ್ತಾನಿಗಳು ಸಿಲುಕಿಕೊಂಡಿದ್ದಾರೆ. ಇವರನೆಲ್ಲಾ ಸುಕ್ಷಿತವಾಗಿ ಮರಳಿಸಲು ವಿದೇಶಾಂಗ ಸಚಿವಾಲಯ ಕಾರ್ಯನಿರತವಾಗಿದೆ. 

ಅನೇಕ ಪಾಕಿಸ್ತಾನಿಗಳು ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ಇವರ ಕುರಿತು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿತ್ತು. ಕೂಡಲೇ ಭಾರತ ಸರ್ಕಾರ ಇವರನ್ನು ಮರಳಿ ವಾಪಸ್ ಕಳುಹಿಸಲು ಮುಂದಾಗಿದೆ. ಅಂತಾ ಪಾಕಿಸ್ತಾನಕ್ಕೆ ತೆರಳಿರುವ ಭಾರತದ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ಕುರಿತು ಪಾಕ್ ಜತೆ ಮಾತುಕತೆ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com