20.3 ಕೋಟಿ ಜನರಿಂದ ಮೋದಿಯವರ ಲಾಕ್‌ಡೌನ್ -2 ಭಾಷಣ ವೀಕ್ಷಣೆ-ಹೊಸ ದಾಖಲೆ ನಿರ್ಮಾಣ ಎಂದ ಬಾರ್ಕ್

ಏ.14ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್‌ಡೌನ್ ಅನ್ನು 19 ದಿನಗಳವರೆಗೆ ವಿಸ್ತರಿಸಿ ಮಾಡಿದ್ದ ಭಾಷಣವನ್ನು ದೂರದರ್ಶನದಲ್ಲಿ 203 ಮಿಲಿಯನ್ ಜನರು ವೀಕ್ಷಿಸಿದ್ದಾರೆ,  ಈ ಕಾರ್ಯಕ್ರಮ ಮೋದಿಯವರ ಭಾಷಣದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿದೆ ಎಂದು ಬಾರ್ಕ್ (BARC) ಹೇಳಿದೆ.
ಮೋದಿಯವರ ಲಾಕ್‌ಡೌನ್ -2 ಭಾಷಣ
ಮೋದಿಯವರ ಲಾಕ್‌ಡೌನ್ -2 ಭಾಷಣ

ನವದೆಹಲಿ: ಏ.14ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್‌ಡೌನ್ ಅನ್ನು 19 ದಿನಗಳವರೆಗೆ ವಿಸ್ತರಿಸಿ ಮಾಡಿದ್ದ ಭಾಷಣವನ್ನು ದೂರದರ್ಶನದಲ್ಲಿ 203 ಮಿಲಿಯನ್ ಜನರು ವೀಕ್ಷಿಸಿದ್ದಾರೆ,  ಈ ಕಾರ್ಯಕ್ರಮ ಮೋದಿಯವರ ಭಾಷಣದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿದೆ ಎಂದು ಬಾರ್ಕ್ (BARC) ಹೇಳಿದೆ.

ಆರೋಗ್ಯ ಸೇತು ಆ್ಯಪ್ ಅನ್ನು ದಾಖಲೆಯ ಸಂಖ್ಯೆಯ ಜನರು ಡೌನ್‌ಲೋಡ್ ಮಾಡಿದ್ದರೂ, ಅವರಲ್ಲಿ ಹತ್ತನೇ ಒಂದು ಭಾಗ ಮಾತ್ರ ಆ್ಯಪ್ ಬಳಸುತ್ತಿದ್ದಾರೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಎಸಿ ನೀಲ್ಸನ್ ಹೇಳಿದೆ.

ಭಾರತದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ನಾಲ್ಕು ಬಾರಿ ಮಾತನಾಡಿದ್ದಾರೆ. ಒಂದು ದಿನದ 'ಜನತಾಕರ್ಫ್ಯೂ, ಲಾಕ್‌ಡೌನ್ ಘೋಷಣೆ, ಚಪ್ಪಾಳೆ ತಟ್ಟುವುದು, ದೀಪ ಬೆಳಗಿಸುವುದುಸೇರಿದಂತೆ ಹಲವು ರೀತಿಯ ಉತ್ತೇಜಿತ ಕರೆ ನೀಡಿದ್ದಾರೆ.

ಅವರು 21 ದಿನಗಳ ಲಾಕ್‌ಡೌನ್ ಘೋಷಿಸಿದಾಗ ಆ ಕಾರ್ಯಕ್ರಮವನ್ನು ದಾಖಲೆಯ 193 ಮಿಲಿಯನ್ ಜನರು ವೀಕ್ಷಿಸಿದ್ದರು.

ಮಂಗಳವಾರ ಪ್ರಸಾರವಾದ 25 ನಿಮಿಷಗಳ ಭಾಷಣದಲ್ಲಿ ಮೋದಿ ಲಾಕ್‌ಡೌನ್ ಅನ್ನು 19 ದಿನಗಳವರೆಗೆ ವಿಸ್ತರಿಸಿದ್ದು, 199 ಪ್ರಸಾರಕರು ಪ್ರಸಾರ ಮಾಡಿದರು ಮತ್ತು ಸುಮಾರು 4 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ಸೃಷ್ಟಿಸಿದ್ದರು. ಇದು ಕೂಡ ಒಂದು ದಾಖಲೆಯಾಗಿದೆ ಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಾಹಕ ಸುನಿಲ್ ಲುಲ್ಲಾ ತಿಳಿಸಿದ್ದಾರೆ. 

ಕೊರೋನಾ ಹಾವಳಿ ಪ್ರಾರಂಭಕ್ಕೆ ಮುನ್ನಿನ ದಿನಗಳಿಗೆ ಹೋಲಿಸಿದರೆ  ಏಪ್ರಿಲ್ 12 ರ ವಾರದಲ್ಲಿ ಒಟ್ಟಾರೆ ಟಿವಿ ಬಳಕೆ ಶೇಕಡಾ 38 ರಷ್ಟು ಏರಿಕೆಯಾಗಿದೆ ಎಂದು ಕೌನ್ಸಿಲ್ ವರದಿ ಮಾಡಿದೆ. ಅದರಲ್ಲಿಯೂ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ ಮತ್ತು ಮಹಾಭಾರತದಂತಹ ಕ್ಲಾಸಿಕ್ ಧಾರಾವಾಹಿಗಳುಖಾಸಗಿ ವಲಯದ ಚಾನೆಲ್‌ಗಳನ್ನು ಮೀರಿ ದೂರದರ್ಶನವನ್ನು ಹೆಚ್ಚು ಜನ ವೀಕ್ಷಿಸುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com