ಮೊರಾದಾಬಾದ್: ವೈದ್ಯಕೀಯ ತಂಡದ ಮೇಲೆ ಹಲ್ಲೆ ನಡೆಸಿದ 17 ಆರೋಪಿಗಳು ಜೈಲಿಗೆ

ಮೊರಾದಾಬಾದ್ ನಲ್ಲಿ ಪೊಲೀಸರು ಹಾಗೂ ವೈದ್ಯಕೀಯ ತಂಡವೊಂದರ ಮೇಲೆ ಹಲ್ಲೆ ನಡೆಸಿದ ಗುಂಪಿನ ವಿರುದ್ಧ  ಕ್ರಮ ಕೈಗೊಳ್ಳಲಾಗಿದ್ದು, ವಿಶೇಷ ನ್ಯಾಯಾಲಯವೊಂದು ಇಂದು ಬೆಳಗ್ಗೆ ಜಾವ 3 ಗಂಟೆ ಸಮಯದಲ್ಲಿ ವಿಚಾರಣೆ ನಡೆಸಿ ಏಳು ಮಹಿಳೆಯರು ಸೇರಿದಂತೆ 17 ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
ಹಲ್ಲೆಗೊಳಗಾದ ವೈದ್ಯರು ಮತ್ತು ಪೊಲೀಸರು
ಹಲ್ಲೆಗೊಳಗಾದ ವೈದ್ಯರು ಮತ್ತು ಪೊಲೀಸರು

ಲಖನೌ: ಮೊರಾದಾಬಾದ್ ನಲ್ಲಿ ಪೊಲೀಸರು ಹಾಗೂ ವೈದ್ಯಕೀಯ ತಂಡವೊಂದರ ಮೇಲೆ ಹಲ್ಲೆ ನಡೆಸಿದ ಗುಂಪಿನ ವಿರುದ್ಧ  ಕ್ರಮ ಕೈಗೊಳ್ಳಲಾಗಿದ್ದು, ವಿಶೇಷ ನ್ಯಾಯಾಲಯವೊಂದು ಇಂದು ಬೆಳಗ್ಗೆ ಜಾವ 3 ಗಂಟೆ ಸಮಯದಲ್ಲಿ ವಿಚಾರಣೆ ನಡೆಸಿ ಏಳು ಮಹಿಳೆಯರು ಸೇರಿದಂತೆ 17 ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ರಿಮಾಂಡ್ ಆದೇಶದ ನಂತರ, ಬಂಧಿಸಲ್ಪಟ್ಟ ಎಲ್ಲಾ 17 ಜನರನ್ನು ಜೈಲಿಗೆ ಕಳುಹಿಸಲಾಗಿದ್ದು, ಬೆಳಗ್ಗೆ 5 ಗಂಟೆ ಸಮಯದಲ್ಲಿ ಪ್ರತ್ಯೇಕ ಬ್ಯಾರಕ್ ನಲ್ಲಿ ಇಡಲಾಗಿದೆ. ಇವರೆಲ್ಲರೂ ಹಾಟ್ ಸ್ಪಾಟ್ ಮೊರಾದಾಬಾದಿಗೆ ಸೇರಿದವರಾಗಿದ್ದಾರೆ.ಏಪ್ರಿಲ್ 14 ರಂದು ಟಿಎಂಯು ವೈದ್ಯಕೀಯ ಕಾಲೇಜಿನಲ್ಲಿ  ಚಿಕಿತ್ಸೆ ವೇಳೆಯಲ್ಲಿ ಕೋವಿಡ್ -19 ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

ಮೃತಪಟ್ಟ ವ್ಯಕ್ತಿಯ ಸಹೋದರ, ಕೋವಿಡ್ ಶಂಕಿತ ವ್ಯಕ್ತಿಯನ್ನು ಕರೆತರಲು ನಾಗ್ಪಾನಿ ಪ್ರದೇಶದತ್ತ ಹೊರಟ್ಟಿದ್ದ ವೈದ್ಯರು, ನರ್ಸ್ ಗಳು ಹಾಗೂ ಪೊಲೀಸರ ಮೇಲೆ ಸ್ಥಳೀಯ ಗುಂಪೊಂದು ದಾಳಿ ನಡೆಸಿತ್ತು. 

ವೈದ್ಯರು ,ಪೊಲೀಸರ ಮೇಲೆ ದಾಳಿ ನಡೆಸಿದ 17 ಜನರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಇತರ 200 ಮಂದಿ ಅಪರಿಚಿತರ ಮೇಲೂ ಕೇಸ್ ದಾಖಲಾಗಿದೆ. ದಾಳಿ ವೇಳೆಯಲ್ಲಿ ಎರಡು ಪೊಲೀಸ್ ವಾಹನ ಹಾಗೂ ಒಂದು ಅಂಬ್ಯುಲೆನ್ಸ್ ಧ್ವಂಸಗೊಳಿಸಲಾಗಿತ್ತು. 

17 ಮಂದಿ ಬಂಧಿತರ ವಿರುದ್ಧ ರಾಷ್ಟ್ರೀಯ ಸುರಕ್ಷತಾ ಕಾಯ್ದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ನಾಪತ್ತೆಯಾಗಿರುವ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ.ದಾಳಿ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಮತ್ತಿತರ ಆಧಾರಗಳ ಮೂಲಕ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com