ಕೊರೋನಾ ಎಫೆಕ್ಟ್: ಪ್ರಯಾಣಿಕರಿಲ್ಲದೆ 167 ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ಗುರುವಾರ 167 ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಒಂದೂವರೆ ಶತಮಾನದಷ್ಟು ಇತಿಹಾಸವಿರುವ ರೈಲ್ವೆ ಮೊದಲ ಬಾರಿಗೆ ತನ್ನ ಸೇವಾ ಪ್ರಾರಂಭೋತ್ಸವ ದಿನವನ್ನು ಯಾವೊಬ್ಬ ಪ್ರಯಾಣಿಕ ರೈಲು ಸಂಚಾರವಿಲ್ಲದೆ ಆಚರಿಸಿಕೊಂಡಿದೆ. ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ ಭಾರತದಲ್ಲಿ ಗೂಡ್ಸ್ ರೈಲುಗಳು ಮಾತ್ರವೇ ಸಂಚಾರ ನಡೆಸಿದೆ.
 

Published: 17th April 2020 12:04 AM  |   Last Updated: 17th April 2020 12:08 AM   |  A+A-


Posted By : Raghavendra Adiga
Source : PTI

ನವದೆಹಲಿ:ಭಾರತೀಯ ರೈಲ್ವೆ ಗುರುವಾರ 167 ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಒಂದೂವರೆ ಶತಮಾನದಷ್ಟು ಇತಿಹಾಸವಿರುವ ರೈಲ್ವೆ ಮೊದಲ ಬಾರಿಗೆ ತನ್ನ ಸೇವಾ ಪ್ರಾರಂಭೋತ್ಸವ ದಿನವನ್ನು ಯಾವೊಬ್ಬ ಪ್ರಯಾಣಿಕ ರೈಲು ಸಂಚಾರವಿಲ್ಲದೆ ಆಚರಿಸಿಕೊಂಡಿದೆ. ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ ಭಾರತದಲ್ಲಿ ಗೂಡ್ಸ್ ರೈಲುಗಳು ಮಾತ್ರವೇ ಸಂಚಾರ ನಡೆಸಿದೆ.

167 ವರ್ಷಗಳ ಹಿಂದೆ 1853 ರಲ್ಲಿ ಈ ದಿನದಂದು ದೇಶದ ಮೊದಲ ಪ್ಯಾಸೆಂಜರ್ ರೈಲು ಮುಂಬಯಿಯ ಬೋರಿ ಬಂಡರ್‌ನಿಂದ ಥಾಣೆಗೆ ಪ್ರಯಾಣಿಸಿತ್ತು.

ಭಾರತೀಯರು 1974 ರಲ್ಲಿ ಮೊದಲ ಬಾರಿಗೆ ರೈಲು ಸಂಚಾರ ಸ್ಥಗಿತದ ಸಮಸ್ಯೆ ಅನುಭವಿಸಿದ್ದರು. ಮೇ 1974 ರಲ್ಲಿ, ಸುಮಾರು ಮೂರು ವಾರಗಳ ಕಾಲ ನಡೆದ ರೈಲ್ವೆ ಮುಷ್ಕರದಲ್ಲಿ, ಚಾಲಕರು, ಸ್ಟೇಷನ್ ಮಾಸ್ಟರ್ಸ್, ಗಾರ್ಡ್, ಟ್ರ್ಯಾಕ್ ಸಿಬ್ಬಂದಿ ಮತ್ತು ಇನ್ನೂ ಅನೇಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

"ನಾನು ಆ ಸಮಯಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳಬಲ್ಲೆ. ನಮ್ಮ ನಾಯಕ ಜಾರ್ಜ್ ಫರ್ನಾಂಡಿಸ್ ಅಂದಿನ ರೈಲ್ವೆ ಸಚಿವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ದರೆ ಅದನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಬಳಿ ಹೇಳುವಾಗ ಆ ಒಪ್ಪಂದ ಮುರಿದು ಬಿದ್ದಿತ್ತು."ಅಖಿಲ ಭಾರತ ರೈಲ್ವೆಮೆನ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ. ಅವರು ಅಂದು ರೈಲ್ವೆಯಲ್ಲಿ ಅಪ್ರೆಂಟಿಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.

"ಫರ್ನಾಂಡಿಸ್ ಅವರನ್ನು ಲಖನೌನಲ್ಲಿ ಜೈಲಿಗೆ ಹಾಕಲಾಗಿದ್ದು ಆ ವೇಳೆ ಕಾರ್ಮಿಕರು ಸಾಕಷ್ಟು ಉಗ್ರ ಹೋರಾಟ ನಡೆಸಿದ್ದರು. " ಇಂದಿನಂತೆಯೇ ಅಂದೂ ಸಹ ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ಸರಕು ರೈಲುಗಳನ್ನು ಓಡಿಸಲಾಯಿತು ಮತ್ತು ಹೌರಾದಿಂದ ದೆಹಲಿಗೆ ಕಲ್ಕಾ ಮೇಲ್ನಂತಹಮಾರ್ಗಗಳಲ್ಲಿ ಕೆಲವು ಪ್ರಯಾಣಿಕ ರೈಲುಗಳನ್ನು ಓಡಿಸಲು ಒಕ್ಕೂಟಗಳು ಒಪ್ಪಿಗೆ ಕೊಟ್ಟಿದ್ದವು.

"ರೈಲ್ವೆ ತಿಹಾಸದಲ್ಲಿ ಎಂದಿಗೂ, ಸೇವೆಗಳಿಗೆ ಇಷ್ಟು ದೀರ್ಘ ಅಡಚಣೆ ಉಂಟಾಗಿಲ್ಲ. ವಿಶ್ವ ಯುದ್ಧದ ಸಮಯದಲ್ಲಿ ಸಹ ರೈಲ್ವೆ ಸೇವೆ ಮಮೂಲಿನಂತಿತ್ತು.974 ರ ರೈಲ್ವೆ ಮುಷ್ಕರದ ಸಮಯದಲ್ಲಿ ಅಥವಾ ಯಾವುದೇ ರಾಷ್ಟ್ರೀಯ ವಿಪತ್ತು ಅಥವಾ ನೈಸರ್ಗಿಕ ವಿಕೋಪದಲ್ಲಿ ಸಹ ರೈಲು ಸೇವೆ ನಿಂತಿರಲಿಲ್ಲ"ಲ್ವೆ ವಕ್ತಾರರು ತಿಳಿಸಿದ್ದಾರೆ.

ಮೊದಲ ಭಾರತೀಯ ರೈಲ್ವೆ ಪ್ರಯಾಣಿಕರ ರೈಲನ್ನು ಏಪ್ರಿಲ್ 16, 1853 ರಂದು ಮುಂಬೈನಿಂದ ಹತ್ತಿರದ ಥಾಣೆಗೆ ಸಂಚಾರ ನಡೆಸಲು ಅನುವು ಮಾಡಲಾಗಿತ್ತು.

ಗುರುವಾರ ರೈಲ್ವೆ ಸಚಿವಾಲಯ ಟ್ವಿಟ್ಟರ್ ನಲ್ಲಿ ರಲ್ವೆ ಸೇವಾ ಪ್ರಾರಂಭೋತ್ಸವ ದಿನಕ್ಕೆ ಶುಭ ಹಾರೈಸಿದೆ. 

ಕೊರೋನಾವೈರಸ್ ಹಾವಳಿಯ ಕಾರಣ ರೈಲ್ವೆ ಮಾರ್ಚ್ 25 ರಿಂದ ಮೇ 3 ರವರೆಗೆ ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕೊರೋನಾವೈರಸ್  ‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 414 ಕ್ಕೆ ಏರಿದೆ ಮತ್ತು ದೇಶದಲ್ಲಿ ಗುರುವಾರ ಪ್ರಕರಣಗಳ ಸಂಖ್ಯೆ 12,380 ಕ್ಕೆ ತಲುಪಿದೆ.

Stay up to date on all the latest ರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp