ಮದ್ಯದ ಬಾಟಲಿಯೊಂದಿಗೆ ಫೋಟೋಗೆ ಪೋಸ್: ಮಧ್ಯಪ್ರದೇಶದ ಮೂವರು ಅಧಿಕಾರಿಗಳು ಅಮಾನತು

ಮದ್ಯದ ಬಾಟಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದ ಮಧ್ಯಪ್ರದೇಶದ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ. 
ಮದ್ಯದ ಬಾಟಲಿಯೊಂದಿಗೆ ಫೋಟೋಗೆ ಪೋಸ್: ಮಧ್ಯಪ್ರದೇಶದ ಮೂವರು ಅಧಿಕಾರಿಗಳು ಅಮಾನತು
ಮದ್ಯದ ಬಾಟಲಿಯೊಂದಿಗೆ ಫೋಟೋಗೆ ಪೋಸ್: ಮಧ್ಯಪ್ರದೇಶದ ಮೂವರು ಅಧಿಕಾರಿಗಳು ಅಮಾನತು

ರೈಸೆನಾ: ಮದ್ಯದ ಬಾಟಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದ ಮಧ್ಯಪ್ರದೇಶದ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ. 

ಕಂದಾಯ ಇಲಾಖೆಯ ಅಜಟ್ ಧಕಡ್, ಧರ್ಮೇಂದ್ರ ಮೆಹ್ರಾ ಹಾಗೂ ದಯಾರಾಮ್ ಅರ್ಮಾ ಅಮಾನತುಗೊಂಡಿರುವ ಅಧಿಕಾರಿಗಳಾಗಿದ್ದಾರೆ.
 
ಲಾಕ್'ಡೌನ್ ನಡುವಲ್ಲೇ ಮದ್ಯ ಸಿಗದೆ ಹಲವರು ಸಂಕಷ್ಟ ಎದುರಿಸುತ್ತಿದ್ದು, ಈ ನಡುವಲ್ಲೇ ಅಧಿಕಾರಿಗಳು ಮದ್ಯದ ಬಾಟಲಿಗಳನ್ನು ಹಿಡಿದು ಫೋಟೋಗೆ ಪೋಸ್ ನೀಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿತ್ತು. ಅಲ್ಲದೆ, ಈ ಬಗ್ಗೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿದ್ದವು. 

ಈ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಸರ್ಕಾರ ಇದೀಗ ಮೂವರೂ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com