ಅರುಣಾಚಲ ಪ್ರದೇಶ ಬಳಿಕ ಮಣಿಪುರ ಕೊರೋನಾ ಮುಕ್ತ ?:ಹಿ.ಪ್ರ.ದಲ್ಲಿ ಗುಣಮುಖ ಹೊಂದಿದ್ದ ವ್ಯಕ್ತಿಯಲ್ಲಿ ಮತ್ತೆ ಸೋಂಕು

ದೇಶದ 12 ರಾಜ್ಯಗಳ 22 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೋನಾ ಸೋಂಕು ಪತ್ತೆಯಾಗಿಲ್ಲ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 36 ಕೊರೋನಾ ಸಾವು ಮತ್ತು 957 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 14 ಸಾವಿರದ 792ಕ್ಕೇರಿದೆ ಮತ್ತು ಸಾವಿನ ಸಂಖ್ಯೆ 448ಕ್ಕೇರಿದೆ.
ಅರುಣಾಚಲ ಪ್ರದೇಶ ಬಳಿಕ ಮಣಿಪುರ ಕೊರೋನಾ ಮುಕ್ತ ?:ಹಿ.ಪ್ರ.ದಲ್ಲಿ ಗುಣಮುಖ ಹೊಂದಿದ್ದ ವ್ಯಕ್ತಿಯಲ್ಲಿ ಮತ್ತೆ ಸೋಂಕು

ನವದೆಹಲಿ:ದೇಶದ 12 ರಾಜ್ಯಗಳ 22 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೋನಾ ಸೋಂಕು ಪತ್ತೆಯಾಗಿಲ್ಲ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 36 ಕೊರೋನಾ ಸಾವು ಮತ್ತು 957 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 14 ಸಾವಿರದ 792ಕ್ಕೇರಿದೆ ಮತ್ತು ಸಾವಿನ ಸಂಖ್ಯೆ 448ಕ್ಕೇರಿದೆ.

ಈ ಮಧ್ಯೆ, ಪಂಜಾಬ್ ನ ಲುಧಿಯಾನದ ಸಹಾಯಕ ಪೊಲೀಸ್ ಕಮಿಷನರ್ ಕೊರೋನಾ ಸೋಂಕಿನಿಂದ 10 ದಿನಗಳ ಕಾಲ ಹೋರಾಡಿ ನಿನ್ನೆ ಮೃತಪಟ್ಟಿದ್ದಾರೆ. ಮುಂಬೈಯಲ್ಲಿ ಕನಿಷ್ಠ 21 ಮಂದಿ ಕಾರ್ಯನಿರತ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದ್ದು, ಅವರಲ್ಲಿ ಐಎನ್ಎಸ್ ಅಂಗ್ರೆಯ ನಾವಿಕರು ಸೇರಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಕೊರೋನಾ ರೋಗಲಕ್ಷಣ ಹೊಂದಿದವರಾಗಿದ್ದು ಒಬ್ಬ ನಾವಿಕನಿಗೆ ಕಳೆದ ಏಪ್ರಿಲ್ 7ರಂದು ಸೋಂಕು ಕಾಣಿಸಿಕೊಂಡಿತ್ತು.

ಇದುವರೆಗೆ ಅರುಣಾಚಲ ಪ್ರದೇಶದಲ್ಲಿ ಯಾವುದೇ ಕೊರೋನಾ ಸೋಂಕು ಕಾಣಿಸಿಕೊಂಡಿಲ್ಲ. ಮಣಿಪುರದಲ್ಲಿ ನಿನ್ನೆ ಮತ್ತೊಬ್ಬ 65 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಸ್ಥಳೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಅಹಂತೆಮ್ ಸಂತ ಸಿಂಗ್ ತಿಳಿಸಿದ್ದಾರೆ.

ಈ ಮಧ್ಯೆ, ಕೊರೋನಾ ವೈರಸ್ ನಿಂದ ಗುಣಮುಖರಾಗಿದ್ದ ಹಿಮಾಚಲ ಪ್ರದೇಶದ ಶಿಮ್ಲಾ ಮೂಲದ ವ್ಯಕ್ತಿಯಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಹಿಮಾಚಲ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 40ಕ್ಕೇರಿದೆ. ಉನಾ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com