ಕೊರೋನಾ ವೈರಸ್ ಕುರಿತು ರಾಜನಾಥ್ ಸಿಂಗ್ ನೇತೃತ್ವದ ಸಚಿವ ತಂಡದ ಐದನೇ ಸಭೆ

ಕೊರೋನಾ ವೈರಸ್ ತಡೆಯಲು ದೇಶದಲ್ಲಿ ಘೋಷಣೆಯಾಗಿರುವ ಲಾಕ್ ಡೌನ್ ನಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿತಗೊಳಿಸುವ ಕುರಿತು ಚರ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ತಂಡ ಶನಿವಾರ ಐದನೇ ಬಾರಿಗೆ ಸಭೆ  ನಡೆಸಿತು.
ಕೊರೋನಾ ವೈರಸ್ ಕುರಿತು ರಾಜನಾಥ್ ಸಿಂಗ್ ಸಭೆ
ಕೊರೋನಾ ವೈರಸ್ ಕುರಿತು ರಾಜನಾಥ್ ಸಿಂಗ್ ಸಭೆ

ನವದೆಹಲಿ: ಕೊರೋನಾ ವೈರಸ್ ತಡೆಯಲು ದೇಶದಲ್ಲಿ ಘೋಷಣೆಯಾಗಿರುವ ಲಾಕ್ ಡೌನ್ ನಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿತಗೊಳಿಸುವ ಕುರಿತು ಚರ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ತಂಡ ಐದನೇ ಬಾರಿಗೆ ಸಭೆ  ನಡೆಸಿತು.

ಕೋವಿಡ್-19 ಕುರಿತು ರಚನೆಯಾಗಿರುವ ಸಚಿವತ ತಂಡ ಏ. 20ರಿಂದ ಹಾಟ್ ಸ್ಪಾಟ್ ಅಲ್ಲದ ವಲಯಗಳಲ್ಲಿ ಭಾಗಶಃ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚಿಸಿತು ಎನ್ನಲಾಗಿದೆ.

ಸಚಿವರ ತಂಡದೊಂದಿಗೆ ಕೋವಿಡ್ -19 ಪರಿಸ್ಥಿತಿಯ ಕುರಿತು ಚರ್ಚಿಸಲಾಯಿತು. ಜನರ ಸಂಕಷ್ಟ ತಡೆಯುವ ಕ್ರಮಗಳು ಮಮತ್ತು ಅದರಲ್ಲಿ ಸಚಿವರ ಪಾತ್ರಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಸೀಮಿತ ಚಟುವಟಿಕೆಗಳಿಗೆ ಅವಕಾಶ  ಕಲ್ಪಿಸಿದ ಸರ್ಕಾರದ ಕ್ರಮ ಮತ್ತು ಆರ್ ಬಿಐ ಘೋಷಿಸಿದ ಯೋಜನೆಗಳ ಕುರಿತು ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಹಲವು ವಿಪಕ್ಷಗಳು ಈ ಸಂದರ್ಭದಲ್ಲಿ ಬಡವರಿಗೆ ನೆರವು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿವೆ. ಸಭೆಯಲ್ಲಿ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ವಾರ್ತಾ ಮತ್ತು ಪ್ರಸಾರ  ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ  ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com