ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ ವೈರಸ್ ಲಾಕ್ ಡೌನ್ ಪೂರ್ಣಗೊಳ್ಳುವವರೆಗೂ ಇ-ಕಾಮರ್ಸ್ ನಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ; ಕೇಂದ್ರದ ಸ್ಪಷ್ಟನೆ

ಕೊರೋನಾ ವೈರಸ್ ಲಾಕ್ ಡೌನ್ ಪೂರ್ಣಗೊಳ್ಳುವವರೆಗೂ ಇ-ಕಾಮರ್ಸ್ ನಲ್ಲಿ ಕೇವಲ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ.

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಪೂರ್ಣಗೊಳ್ಳುವವರೆಗೂ ಇ-ಕಾಮರ್ಸ್ ನಲ್ಲಿ ಕೇವಲ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ.

ಲಾಕ್ ಡೌನ್ ಸಂಬಂಧ ಕೇಂದ್ರ ಸರ್ಕಾರ ಮತ್ತೊಂದು ಬದಲಾವಣೆ ತಂದಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಈ ಕಾಮರ್ಸ್ ನಲ್ಲಿ ಕೇವಲ ಅಗತ್ಯ ವಸ್ತುಗಳ ಡೆಲಿವರಿಗೆ ಮಾತ್ರ ಅವಕಾಶ ನೀಡಿದೆ. ಈ ಹಿಂದೆ ಏಪ್ರಿಲ್ 20ರ ಬಳಿಕ ಇ-ಕಾಮರ್ಸ್ ನಲ್ಲಿ ಅವಶ್ಯಕ ವಸ್ತುಗಳು ಮಾತ್ರವಲ್ಲದೇ,  ಟಿವಿ. ರೆಫ್ರಿಜರೇಟರ್ ಮತ್ತು ಲ್ಯಾಪ್ ಟಾಪ್ ನಂತಹ ವಸ್ತುಗಳ ಡೆಲಿವರಿಗೆ ಅವಕಾಶ ನೀಡುವ ಸಂಬಂಧ ಚರ್ಚೆ ನಡೆದಿತ್ತು. ಅಲ್ಲದೆ ಕಳೆದ ವಾರ ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಗಳ ಪ್ರಕಾರ, ಏಪ್ರಿಲ್​ 20ರಿಂದ ಹಾಟ್​​ ಸ್ಪಾಟ್​ ವ್ಯಾಪ್ತಿಗೆ ಸೇರದ ಪ್ರದೇಶಗಳಲ್ಲಿ ಮೊಬೈಲ್​  ಫೋನ್ ಮತ್ತು ರೆಫ್ರಿಜರೇಟರ್​ಗಳಂತಹ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಬಹುದು ಎಂದು ಹೇಳಿತ್ತು. ಹೀಗಾಗಿ ಇ-ಕಾಮರ್ಸ್​ ಕಂಪನಿಗಳು ಸರಕುಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡಲು ಸಜ್ಜಾಗಿದ್ದವು.

ಆದರೆ ಇಂದು ಕೇಂದ್ರ ಗೃಹ ಸಚಿವಾಲಯವು ಈ ಅನುಮತಿಯನ್ನು ವಾಪಸ್ ಪಡೆದಿದ್ದು, ತೀರಾ ಅನಿವಾರ್ಯ ಇಲ್ಲದ ಇ-ಕಾಮರ್ಸ್​ ಉತ್ಪನ್ನಗಳನ್ನು ಸರಬರಾಜು ಮಾಡುವುದರ ಮೇಲೆ ನಿಷೇಧ ಮುಂದುವರೆಸಿದೆ. ದೇಶಾದ್ಯಂತ ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಈ ಕ್ರಮ  ಕೈಗೊಳ್ಳಲಾಗಿದೆ. ಮಾರ್ಚ್​ 24ರಿಂದ ಏಪ್ರಿಲ್​ 14ರ ಮೊದಲ ಹಂತದ ಲಾಕ್​ಡೌನ್ ಅವಧಿಯಲ್ಲಿ ಆಹಾರ, ಔಷಧ ಹಾಗೂ ವೈದ್ಯಕೀಯ ಉಪಕರಣಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಇ-ಕಾಮರ್ಸ್​​ ಫ್ಲಾಟ್​​ ಫಾರ್ಮ್​ಗಳ ಮೂಲಕ ತಲುಪಿಸಲು ಕೇಂದ್ರ ಅನುಮತಿ ನೀಡಿತ್ತು.

Related Stories

No stories found.

Advertisement

X
Kannada Prabha
www.kannadaprabha.com