ಮುಂಬೈ, ಕೋಲ್ಕತಾ, ಜೈಪುರ, ಇಂದೋರ್'ನಲ್ಲಿ ಕೊರೋನಾ ಪರಿಸ್ಥಿತಿ ಗಂಭೀರ: ಕೇಂದ್ರ ಗೃಹ ಸಚಿವಾಲಯ

ಇಂದೋರ್, ಮುಂಬೈ, ಪುಣೆ, ಜೈಪುರ, ಕೋಲ್ಕತಾ ಹಾಗೂ ಪಶ್ಚಿಮ ಬಂಗಾಳ ವಿವಿಧ ಪ್ರದೇಶಗಳಲ್ಲಿ ಕೊರೋನಾ ಗಂಭೀರವಾಗಿುದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಂದೋರ್, ಮುಂಬೈ, ಪುಣೆ, ಜೈಪುರ, ಕೋಲ್ಕತಾ ಹಾಗೂ ಪಶ್ಚಿಮ ಬಂಗಾಳ ವಿವಿಧ ಪ್ರದೇಶಗಳಲ್ಲಿ ಕೊರೋನಾ ಗಂಭೀರವಾಗಿುದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 

ದೇಶದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ಕುರಿತಂತೆ ಆಯಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. 

ಇಂದೋರ್, ಮುಂಬೈ, ಪುಣೆ, ಜೈಪುರ, ಕೋಲ್ಕತಾ ಹಾಗೂ ಪಶ್ಚಿಮ ಬಂಗಾಳ ವಿವಿಧ ಪ್ರದೇಶಗಳಲ್ಲಿ ಕೊರೋನಾ ಗಂಭೀರವಾಗಿುದೆ ಅಲ್ಲದೆ, ಆರೋಗ್ಯ ಸಿಬ್ಬಂದಿಗಳ ವಿರುದ್ಧ ಹಲ್ಲೆಗಳು ನಡೆಯುತ್ತಿವೆ. ಸಾಮಾಜಿಕ ಅಂತರಗಳ ನಿಯಮಗಳ ಉಲ್ಲಂಘನೆಗಳು ಮುಂದುವರೆದಿವೆ. ನಗರ ಪ್ರದೇಶಗಳ ವಾಹನಗಳ ಸಂಚಾರ ಮುಂದುವರೆದಿದ್ದು, ಇಂತಹ ಬೆಳವಣಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ. 

ಈಗಾಗಲೇ ಸರ್ಕಾರ 6 ಅಂತರ್ ಸಚಿವಾಲಯದ ಕೇಂದ್ರದ ತಂಡವನ್ನು ರಚನೆ ಮಾಡಿದ್ದು, ಈ ತಂಡ ಆಯಾ ರಾಜ್ಯಗಳ ಹಾಟ್ ಸ್ಪಾಟ್ ಗಳಲ್ಲಿರುವ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ತಂಡವೇ ಲಾಕ್'ಡೌನ್ ಮುಂದುವರೆಸುವ ಕುರಿತು, ಅಗತ್ಯ ಸೇವೆಗಳ ಕುರಿತು, ಆರೋಗ್ಯ ಸಿಬ್ಬಂದಿಗಳ ಸುರಕ್ಷತೆಗಳ ಕುರಿತು ಸಲಹೆಗಳನ್ನು ನೀಡಲಿದೆ ಎಂದು ತಿಳಿಸಿದೆ. 

ಈ ನಡುವೆ ದೇಶದಲ್ಲಿ ಸಾವಿನ ಸಂಖ್ಯೆ 543ಕ್ಕೆ ಏರಿಕೆಯಾಗಿದ್ದು, 17,265 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com