ಕೋವಿಡ್-19: 12 ದಿನದ ಮಗುವಿನಲ್ಲೂ ಕೊರೋನಾ ಪಾಸಿಟಿವ್

ದೇಶದಾದ್ಯಂತ ಭಾರೀ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಹೆಚ್ಚಿಸುತ್ತಲೇ ಇದ್ದು, 12 ದಿನಗಳ ಮಗುವಿನಲ್ಲೂ ಸೋಂಕು ಪತ್ತೆಯಾಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ದೇಶದಾದ್ಯಂತ ಭಾರೀ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಹೆಚ್ಚಿಸುತ್ತಲೇ ಇದ್ದು, 12 ದಿನಗಳ ಮಗುವಿನಲ್ಲೂ ಸೋಂಕು ಪತ್ತೆಯಾಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. 

ಮಧ್ಯಪ್ರದೇಶದಲ್ಲಿ ಏಪ್ರಿಲ್ 7 ರಂದು ಜನಿಸಿದ್ದ ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ಜು, ಈ ಪ್ರಕರಣದಿಂದಾಗಿ ಜನತೆಯಲ್ಲಿ ವೈರಸ್ ಕುರಿತಂತೆ ಮತ್ತಷ್ಟು ಆತಂಕ ಹೆಚ್ಚಾಗಿದೆ. 

ಆಸ್ಪತ್ರೆಯ ಸಿಬ್ಬಂದಿಯೋರ್ವರಿಂದಾಗಿ ಮಗುವಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಡೆಲಿವರಿ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯಲ್ಲಿ ವೈರಸ್ ಪತ್ತೆಯಾಗಿತ್ತು. ಇದೀಗ ಮಗುವಿನ ತಾಯಿಯಲ್ಲೂ ವೈರಸ್ ದೃಢಪಟ್ಟಿದೆ ಎಂದು ಭೋಪಾಲ್ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸರ್ಕಾರಿ ಅನುದಾನಿತ ಆಸ್ಪತ್ರೆ ಸುಲ್ತಾನಿಯಾ ಜನನ ಆಸ್ಪತ್ರೆಯಲ್ಲಿ ಹೆಣ್ಣು ಮಗು ಏಪ್ರಿಲ್ 7 ರಂದು ಜನಿಸಿತ್ತು. ಏಪ್ರಿಲ್ 11 ರಂದು ತಾಯಿ ಹಾಗೂ ಮಗು ಇಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ದಿನಪತ್ರಿಕೆ ಓದುತ್ತಿದ್ದ ವೇಳೆ ಆಸ್ಪತ್ರೆಯ ಸಿಬ್ಬಂದಿಯೊರ್ವರಲ್ಲಿ ವೈರಸ್ ಪತ್ತೆಯಾಗಿರುವುದನ್ನು ಓದಿದ್ದೆ. ಕೂಡಲೇ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ್ದೆ, ಆದರೆ, ಆವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಸ್ಥಳೀಯ ಆರೋಗ್ಯ ಶಿಬಿರದಲ್ಲಿ ಮಗುವನ್ನು ಪರೀಕ್ಷೆಗೊಳಪಡಿಸಿದ್ದೆ. ಇದೀಗ ವರದಿಯಲ್ಲಿ ವೈರಸ್ ದೃಢಪಟ್ಟಿದೆ ಎಂದು ಮಗುವಿನ ತಂದೆ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com