ತೆಲಂಗಾಣ: ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸರ ವೇತನ ಶೇ.10ರಷ್ಟು ಹೆಚ್ಚಳ!

ಮಾರಕ ಕೊರೋನಾ ವೈರಸ್ ವಿರುದ್ಧ ತಮ್ಮ ಜೀವವನ್ನೂ ಲೆಕ್ಕಿಸದೇ ಜನ ಸಾಮಾನ್ಯರ ಜೀವ ರಕ್ಷಣೆಗಾಗಿ ಹೋರಾಡುತ್ತಿರುವ ಪೊಲೀಸರಿಗೆ ಸರ್ಕಾರ ಬಂಪರ್ ಉಡುಗೊರೆ ನೀಡಿದ್ದು, ಪೊಲೀಸರ ವೇತನದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಮಾರಕ ಕೊರೋನಾ ವೈರಸ್ ವಿರುದ್ಧ ತಮ್ಮ ಜೀವವನ್ನೂ ಲೆಕ್ಕಿಸದೇ ಜನ ಸಾಮಾನ್ಯರ ಜೀವ ರಕ್ಷಣೆಗಾಗಿ ಹೋರಾಡುತ್ತಿರುವ ಪೊಲೀಸರಿಗೆ ಸರ್ಕಾರ ಬಂಪರ್ ಉಡುಗೊರೆ ನೀಡಿದ್ದು, ಪೊಲೀಸರ ವೇತನದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿದೆ.

ಹೌದು.. ನೆರೆಯ ತೆಲಂಗಾಣ ಸರ್ಕಾರ ಇಂತಹುದೊಂದು ಬಂಪರ್ ಉಡುಗೊರೆಯನ್ನು ತೆಲಂಗಾಣ ಪೊಲೀಸರಿಗೆ ನೀಡಿದೆ. ಅದರಂತೆ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸರ ವೇತನವನ್ನು ಶೇ.10ರಷ್ಟು ಹೆಚ್ಚಳ ಮಾಡಿದೆ.

ತೆಲಂಗಾಣ ಸಿಎಂ ಕೆ ಚಂದ್ರ ಶೇಖರ್ ರಾವ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೋನಾ ವೈರಸ್ ನಿರ್ವಹಣೆ ಕುರಿತಂತೆ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಮುಂಬರುವ ಮೇ 7ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲು ತೆಲಂಗಾಣ  ಸರ್ಕಾರ ನಿರ್ಧರಿಸಿದ್ದು, ಅಂತೆಯೇ ತೆಲಂಗಾಣದ ಯಾವುದೇ ಜಿಲ್ಲೆಯಲ್ಲಿ ಲಾಕ್ ಡೌನ್ ವಿನಾಯಿತಿ ನೀಡದೇ ಇರಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. 

ಇನ್ನು ತೆಲಂಗಾಣದಲ್ಲಿ ಟ್ಯೂಷನ್ ಫೀ ಏರಿಕೆ ಮಾಡದಂತೆ ಆದೇಶ ನೀಡಲಾಗಿದ್ದು, ಆದೇಶ ಉಲ್ಲಂಘಿಸಿದರೆ ಟ್ಯೂಷನ್ ಪರವಾನಗಿ ರದ್ದು ಮಾಡಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. ಅಷ್ಟು ಮಾತ್ರವಲ್ಲದೇ ವಿದ್ಯಾರ್ಥಿಗಳ ಇಡೀ ವರ್ಷದ ಫೀ ಅನ್ನು ಏಕಕಾಲಕ್ಕೆ  ಸಂಗ್ರಹಿಸದಂತೆಯೂ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಇಷ್ಟು ಮಾತ್ರವಲ್ಲದೇ ವಲಸೆ ಕಾರ್ಮಿಕರಿಗೆ 1500 ರೂ ಸಹಾಯ ಧನ ಮತ್ತು ಉಚಿತ ರೇಷನ್ ನೀಡಲು ತೆಲಂಗಾಣ ಸರ್ಕಾರ ಮುಂದಾಗಿದೆ. ಅಂತೆಯೇ ಸ್ವಿಗ್ಗಿ, ಜೊಮಾಟೋ ನಂತಹ ಆಹಾರ ಡೆಲಿವರಿ ಸೇವೆಗಳ  ನಿಷೇಧವನ್ನು ತೆಲಂಗಾಣ ಸರ್ಕಾರ ಮುಂದುವರೆಸಿದೆ.

ತೆಲಂಗಾಣದಲ್ಲಿ ಈ ವರೆಗೂ 844 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 18 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಈ ವರೆಗೂ 186 ಮಂದಿ ಗುಣಮುಖರಾಗಿದ್ದಾರೆ. ಅತ್ತ ದುಬೈನಲ್ಲಿ ಇಂದು ತೆಲಂಗಾಣ ಮೂಲದ ಇಬ್ಬರು ವ್ಯಕ್ತಿಗಳು ಕೊರೋನಾ ವೈರಸ್  ನಿಂದಾಗಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com