ಭಾರತದ ಹೊಸ ಎಫ್ ಡಿಐ ಮಾನದಂಡಗಳು: ಮುಕ್ತ ವ್ಯಾಪಾರ ತತ್ವಗಳ ಉಲ್ಲಂಘನೆ- ಚೀನಾ ರಾಯಭಾರ ಕಚೇರಿ

ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ಮಾಡಿರುವ ಹೊಸ ಮಾನದಂಡಗಳು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯ ರಹಿತ ತತ್ವಗಳು ಹಾಗೂ ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗಳಿಗೆ ವಿರುದ್ಧವಾಗಿವೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರರು ಇಂದು ಟೀಕಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ಮಾಡಿರುವ ಹೊಸ ಮಾನದಂಡಗಳು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯ ರಹಿತ ತತ್ವಗಳು ಹಾಗೂ ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗಳಿಗೆ ವಿರುದ್ಧವಾಗಿವೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರರು ಇಂದು ಟೀಕಿಸಿದ್ದಾರೆ.

ಹೊಸದಾಗಿ ಪರಿಚಯಿಸಿರುವ 'ಹೆಚ್ಚುವರಿ ಅಡೆತಡೆಗಳು' ನೀತಿಗಳು ಹೂಡಿಕೆಗಾಗಿ ಮುಕ್ತ, ನ್ಯಾಯ ಸಮ್ಮತ, ತಾರತಮ್ಯ ರಹಿತ, ಪ್ರಾಮಾಣಿಕ ವಾತಾವರಣ ಸೃಷ್ಟಿಸಬೇಕು ಜಿ-20 ಗುಂಪಿನಿಂದ ಹೊರಬಂದ ಒಮ್ಮತದ ನಿರ್ಣಯಗಳಿಗೂ ವಿರುದ್ಧವಾಗಿದೆ ಎಂದು ಚೀನಾ ಅಧಿಕಾರಿ ಹೇಳಿದ್ದಾರೆ. 

ಕೊರೋನಾವೈರಸ್  ಸಾಂಕ್ರಾಮಿಕ ರೋಗ ಉಲ್ಬಣದ ನಂತರ  ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳಿಂದ ವಿದೇಶಿ ಹೂಡಿಕೆಗಳಿಗೆ ಅನುಮತಿಯನ್ನು ಭಾರತ ಕಳೆದ ವಾರ ಕಡ್ಡಾಯಗೊಳಿಸಿತ್ತು

ನಿರ್ದಿಷ್ಟ ರಾಷ್ಟ್ರಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ರೂಪಿಸಿರುವ ಹೆಚ್ಚುವರಿ ಅಡೆತಡೆಗಳು ನೀತಿಯಿಂದಾಗಿ ಡಬ್ಯ್ಲೂಟಿಒ ತತ್ವಗಳು ಉಲ್ಲಂಘನೆಯಾಗಿವೆ. ಉದಾರೀಕರಣ ಮತ್ತು ವ್ಯಾಪಾರ ಮತ್ತು ಹೂಡಿಕೆಯ ಅನುಕೂಲತೆಯ ಸಾಮಾನ್ಯ ಪ್ರವೃತ್ತಿಗೆ ವಿರುದ್ಧವಾಗಿದೆ ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com