ಅಮೆರಿಕಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸಾಧ್ಯವಿಲ್ಲ- ಸುಪ್ರೀಂಕೋರ್ಟ್ 

ಕೊರೋನಾ ವೈರಸ್ ಲಾಕ್ ಡೌನ್ ಮಧ್ಯೆ ಅಮೆರಿಕಾದಲ್ಲಿ ಸಿಲುಕಿರುವವರನ್ನು ಸ್ವದೇಶಕ್ಕೆ ಕರೆತರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಮಧ್ಯೆ ಅಮೆರಿಕಾದಲ್ಲಿ ಸಿಲುಕಿರುವವರನ್ನು ಸ್ವದೇಶಕ್ಕೆ ಕರೆತರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಅಮೆರಿಕಾದಲ್ಲಿ ಸಿಲುಕಿರುವವರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ನೇತೃತ್ವದ ಮೂವರು ಸದಸ್ಯರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.

ಅಮೆರಿಕದಲ್ಲಿ ಸಿಲುಕಿರುವ ಭಾರತೀಯರಿಗೆ ನೆರವು ನೀಡಲಾಗುತ್ತಿದೆ. ಅಮೆರಿಕಾದಾದ್ಯಂತ ಇರುವ ಭಾರತೀಯರನ್ನು ಕರೆತರಲು ಸಾಧ್ಯವಿಲ್ಲ. ಅಮೆರಿಕಾ ಸರ್ಕಾರ ವೀಸಾ ಅವಧಿಯನ್ನು ವಿಸ್ತರಿಸಿದೆ.ಇನ್ನೊಂದಿಷ್ಟು ಕಾಲ ಕಾಯೋಣ ಎಂದು ನ್ಯಾಯಾಲಯ ಹೇಳಿದೆ.

ವೀಸಾ ವಿಸ್ತರಣೆ ಅರ್ಜಿಗಳ ವೆಚ್ಚವನ್ನು 500 ಡಾಲರ್ ಗಳಿಗೆ ಹೆಚ್ಚಿಸಿರುವುದರಿಂದ ವೀಸಾ ಸಿಗಲಿದೆ ಎಂಬ ಗ್ಯಾರಂಟಿ ಇಲ್ಲ ಎಂದು ದೂರುದಾರ ಮತ್ತು ವಕೀಲ ವಿಬಾ ದತ್ತಾ ಮಾಕಿಜಾ ಹೇಳಿದರು. 

ಅಮೆರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿ ನೆರವು ಯಾಚಿಸುತ್ತಿರುವ 110 ಜನರ ಪಟ್ಟಿಯನ್ನು ನಾವು ಹೊಂದಿದ್ದೇವೆ.ಅಲ್ಲಿ ಸಹಾಯವಾಣಿಗಳು ಇವೆ. ಪ್ರಕರಣದ ಆಧಾರದ ಮೇಲೆ ಸ್ಥಳಾಂತರದ ಬಗ್ಗೆ ಗಮನ ಹರಿಸುವುದಾಗಿ ಸರ್ಕಾರ ಹೇಳುತ್ತಿದೆ.ಮೊದಲು ಸ್ಥಳಾಂತರ ಮಾಡಬೇಕಿದ್ದು, ಪ್ರಾಮಾಣಿಕತೆಯ ಅಗತ್ಯವಿದೆ ಎಂದು ಮಾಕಿಜಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ಈ ಹಿಂದೆ ಸ್ಥಳಾಂತರ ಮಾಡಲಾಗಿದೆ ಆದರೆ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. 

ಪ್ರತಿಯೊಂದು ರಾಷ್ಟ್ರಗಳು ಕೋವಿಡ್-19 ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ತೀವ್ರ ಪ್ರಯತ್ನ ನಡೆಸುತ್ತಿವೆ. ಏಕೆ ನಿಮ್ಮಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಧೀಶ ಕೌಲ್, ಈ ಸಂದರ್ಭದಲ್ಲಿ ಏನನ್ನೂ ನಿರ್ದೇಶಿಸುವ ಸನ್ನಿವೇಶದಲ್ಲಿ ನಾವು ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com