ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ ವೈರಸ್: ಗರಿಷ್ಠ ಸಾವು ಕಂಡ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರಕ್ಕೆ ಅಗ್ರ ಸ್ಥಾನ, ಕರ್ನಾಟಕಕ್ಕೆ? 

ಮಾರಕ ಕೊರೋನಾ ವೈರಸ್ ನಿಂದಾಗಿ ಅತೀ ಹೆಚ್ಚು ಸಾವು ಕಂಡ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ.

ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ ಅತೀ ಹೆಚ್ಚು ಸಾವು ಕಂಡ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ.

ಹೌದು.. ದೇಶದಲ್ಲಿ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 645ಕ್ಕೆ ಏರಿಕೆಯಾಗಿದ್ದು, ಅಂತೆಯೇ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 20,111ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, 15,474 ಸೋಂಕಿತರು  ಚಿಕಿತ್ಸಾ ಹಂತದಲ್ಲಿದ್ದು, 3,869 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಸೋಂಕಿತರ ಪೈಕಿ 77 ಮಂದಿ ವಿದೇಶಿಗರೂ ಕೂಡ ಇದ್ದು, ಮಂಗಳವಾರದಿಂದ ಇಲ್ಲಿಯವರೆಗೂ ದೇಶದಲ್ಲಿ ಕೊರೋನಾ ವೈರಸ್ ಗೆ 37 ಮಂದಿ ಬಲಿಯಾಗಿದ್ದಾರೆ.

ಮಹಾರಾಷ್ಟ್ರವೊಂದರಲ್ಲೇ 19 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಗುಜರಾತ್ ನಲ್ಲಿ 13, ಪಶ್ಚಿಮ ಬಂಗಾಳದಲ್ಲಿ 3 ಮತ್ತು ತಮಿಳುನಾಡು, ಜಾರ್ಖಂಡ್ ನಲ್ಲಿ ತಲಾ ಒಬ್ಬ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಕೊರೋನಾ ವೈರೈಸ್ ಗೆ ಅತೀ ಹೆಚ್ಚು ಸಾವನ್ನು ಕಂಡ ರಾಜ್ಯಗಳ ಪಟ್ಟಿಯನ್ನು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ್ದು, 645 ಸಾವುಗಳ ಪೈಕಿ 251 ಸಾವುಗಳ ದಾಖಲೆ ಹೊಂದಿರುವ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಗುಜರಾತ್ 2ನೇ ಸ್ಥಾನದಲ್ಲಿದ್ದು, ಗುಜರಾತ್  ನಲ್ಲಿ ಈ ವರೆಗೂ 90 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿ ಇಂತಿದೆ
1..ಮಹಾರಾಷ್ಟ್ರ-251 ಸಾವು
2.ಗುಜರಾತ್ 90 ಸಾವು
3.ಮಧ್ಯಪ್ರದೇಶ 76 ಸಾವು
4.ದೆಹಲಿ 47 ಸಾವು
5.ರಾಜಸ್ಥಾನ 25 ಸಾವು
6.ತೆಲಂಗಾಣ 23 ಸಾವು
7.ಆಂಧ್ರಪ್ರದೇಶ 22 ಸಾವು
8.ಉತ್ತರ ಪ್ರದೇಶ 20 ಸಾವು
9.ತಮಿಳುನಾಡು 18 ಸಾವು
10.ಕರ್ನಾಟಕ 17 ಸಾವು 
11.ಪಂಜಾಬ್ 16 ಸಾವು
12.ಪಶ್ಚಿಮ ಬಂಗಾಳ 15 ಸಾವು
13.ಜಮ್ಮು ಮತ್ತು ಕಾಶ್ಮೀರ 5 ಸಾವು
14.ಕೇರಳ, ಜಾರ್ಖಂಡ್ ಮತ್ತು ಹರಿಯಾಣ  (ತಲಾ ಮೂರು ಸಾವು)
15.ಬಿಹಾರ 2 ಸಾವು
16.ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸಾಂ (ತಲಾ ಒಂದು ಸಾವು)

Related Stories

No stories found.

Advertisement

X
Kannada Prabha
www.kannadaprabha.com